ಅನುದಿನದ ಸಂಭೋಗದಲ್ಲಿ ಘಾಸಿಗೊಂಡ ಹೃದಯಗಳ ಗಾಯವನ್ನು ಮಾಯಮಾಡುವ ಮುಲಾಮಿದೆ. ಸಂಭೋಗದ ನಂತರ ಮನಸುಗಳು ಒಂದಾಗುತ್ತವೆ, ದೇಹಗಳು ಮತ್ತೆ ಮತ್ತೆ ಬೆಸೆಯುವ ಆತುರ ತೋರುತ್ತವೆ. ಕಣ್ಣು ಕಣ್ಣು ಒಂದಾಗಿರುತ್ತವೆ, ಮನಸು ಮನಸು ಸೇರಿರುತ್ತವೆ, ದಿನರಾತ್ರಿ ಕಂಡ ಕನಸು ತಾನೇತಾನಾಗಿ ನನಸಾಗಿರುತ್ತದೆ.
ವಿಜ್ಞಾನಿಗಳ ಪ್ರಕಾರ, ಕಾಮಕ್ರೀಡೆ ನಡೆಸುವಾಗ ಮತ್ತು ನಂತರ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗಿ, ದಂಪತಿಗಳಲ್ಲಿ ನಂಬುಗೆ ಹೆಚ್ಚಿಸಿ, ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಾಯ ನೀಡುತ್ತದೆ. ಇದಕ್ಕಾಗಿಯೇ ಆಕ್ಸಿಟೋಸಿನ್ ಹಾರ್ಮೋನನ್ನು ಲವ್ ಹಾರ್ಮೋನ್ ಎಂದೂ ಕರೆಯುತ್ತಾರೆ. ಇದೇ ಹಾರ್ಮೋನ್ ಉತ್ತಮ ನಿದ್ದೆ ಬರಲು ಕೂಡ ಸಹಕಾರಿ.
ಕಾಮನೆ ಕೆರಳಿದ ಹೆಂಡತಿ ಗಂಡನ ಮೇಲೆ ಸಮ್ಮೋಹನಾಸ್ತ್ರ ಎಸೆದಂತೆ, ದೇಹವೆರಡು ಬೆಸೆದ ಮೇಲೆ ನಡೆಯುವ ಪ್ರೇಮಸಲ್ಲಾಪ ದಂಪತಿಗಳ ಮನಸ್ಸಿನ ಮೇಲೆ ಪ್ರೇಮಾಸ್ತ್ರವನ್ನು ಎಸೆದಿರುತ್ತದೆ. ಕಹಿಮನಸ್ಸನ್ನು ಕರಗಿಸಿ ಸಂಭೋಗ ಮನಸ್ಸಿನಲ್ಲಿ ಸಿಹಿಯನ್ನು ತುಂಬುತ್ತದೆ. ಒಡೆದ ಹೃದಯಗಳು ಒಂದಾಗುತ್ತವೆ. ಬದುಕಲ್ಲಿ ಹೊಸ ಚೈತನ್ಯ ತುಂಬುತ್ತದೆ. ಸಂಭೋಗ ಬದುಕಿಗೆ ಒಂದು ಪರಿಪೂರ್ಣತೆ ತಂದುಕೊಡುತ್ತದೆ.