ಬೆವರು ಕಿತ್ತುಬಂದು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದ ಅರೆಹೊತ್ತಿನಲ್ಲಿ ನಿದಿರಾದೇವಿ ಮೆಲ್ಲನೆ ಬಂದು ಚುಕ್ಕು ಬಡಿದಿರುತ್ತಾಳೆ. ಆಹಾ, ಎಂಥಾ ನಿದ್ದೆ. ಅಂಥ ಕೇಳಿಯ ಮಜಾ ಎಂದೂ ದಕ್ಕಿರಲಿಲ್ಲ, ಇಂತಹ ಸುಖದ ನಿದ್ದೆ ಎಂದೂ ಹತ್ತಿರಲಿಲ್ಲ ಎಂದು ಪ್ರತಿಬಾರಿ ಹೇಳುತ್ತೀರಿ. ಪ್ರೇಮಸಲ್ಲಾಸದ ಮರುಗಳಿಗೆಯಲ್ಲಿ ನಿದಿರಾದೇವಿಯ ಆಲಾಪ!
ಆ ಹೊತ್ತಿನಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಎಂಬ ಹಾರ್ಮೋನು ನಿದ್ರೆ ಬರಲು ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಉತ್ತಮ ಪ್ರಣಯಕೇಳಿಯಿಂದ ದೇಹವೂ ದಣಿದಿರುತ್ತದೆ, ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ, ರಾತ್ರಿವೇಳೆಯಲ್ಲಿ ಕಣ್ಣುಗಳೂ ನಿದಿರೆಯ ಸಂಗವನ್ನು ಬಯಸಿರುತ್ತವೆ. ಇನ್ನೇನು ಬೇಕು ನಿದ್ರಾಪರವಶರಾಗಲು?
ಉತ್ತಮ ನಿದ್ರೆ ಪಡೆದ ಮರುದಿನ ಮನೋಲ್ಲಾಸ ಮತ್ತೆ ಪುಟಿದೇಳುತ್ತಿರುತ್ತದೆ. ದೇಹವೂ ಆರೋಗ್ಯದಿಂದ ನಳನಳಿಸುತ್ತಿರುತ್ತದೆ. ಪ್ರೇಮ ಸಲ್ಲಾಪ ಮಾಡಬೇಕೆಂದಿದ್ದರೆ ನಿದ್ದೆಗೆ ಹೋಗುವ ಮುಂಚಿನ ಸಮಯವನ್ನೇ ಆಯ್ದುಕೊಳ್ಳಿ. ಮಧ್ಯರಾತ್ರಿ ಹೊದಿಕೆ ಮತ್ತಿತರ ಬಟ್ಟೆಗಳನ್ನು ಕಿತ್ತುಬಿಸಾಡಿ ಸರಸ ಸಲ್ಲಾಸ ನಡೆಸಿದರೂ ಪರವಾಗಿಲ್ಲ. ಅರ್ಧ ಗಂಟೆಯ ವರ್ಕೌಟ್ ನಂತರ ನಿದ್ರೆಗೆ ಜಾರಿರಿ, ಸ್ವೀಟ್ ಡ್ರೀಮ್ಸ್.