
ಎರಡು ಮೋಡಗಳು ಡಿಕ್ಕಿ ಹೊಡೆದಂತೆ ನಡೆಯುವ ಸರಸ ಸಲ್ಲಾಪ ಉತ್ತಮ ಆರೋಗ್ಯವನ್ನು ಕೊಡುವುದರ ಜೊತೆಗೆ ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಆತ್ಮವಿಶ್ವಾಸವಿದ್ದಲ್ಲಿ ಪ್ರೇಮಸಲ್ಲಾಪವೂ ಅಮೋಘವಾಗಿರುತ್ತದೆ ಅಥವಾ ಮನತಣಿಸುವ ಸಂಭೋಗದಿಂದಲೇ ಆತ್ಮವಿಶ್ವಾಸ ಭೋರ್ಗರೆಯುತ್ತಿರುತ್ತದೆ.
ನೀವೇ ನೋಡಿರುತ್ತೀರಿ. ಲೈಂಗಿಕ ಕ್ರಿಯೆ ನಡೆಸುವಲ್ಲಿ ಅಥವಾ ಮನದನ್ನೆಯ ತಣಿಸುವಲ್ಲಿ ಸೋತ 'ಪುರುಷ' ತನ್ನ ಆತ್ಮವಿಶ್ವಾಸ ಕಳೆದುಕೊಂಡಿರುತ್ತಾನೆ. ಈ ಕಾರಣದಿಂದಾಗಿ ಅನೇಕ ಮದುವೆಗಳು ವಿಚ್ಛೇದನದಲ್ಲಿ ಪರ್ಯವಸಾನವಾಗಿವೆ. ಹೆಣ್ಣಿಗೆ ಕಾಮತೃಪ್ತಿ ನೀಡಿದ ಗಂಡಸಲ್ಲಿ ತಾನೊಬ್ಬ ಪುರುಷ ಎಂಬ ಭಾವ ತಾನೇ ತಾನಾಗುತ್ತದೆ. ಇದು ಆತ್ಮಗೌರವವನ್ನು ಕೂಡ ಹೆಚ್ಚಿಸುತ್ತದೆ.
ಮನಮೆಚ್ಚಿದ ಮಡದಿಯೊಡನೆ ಲೈಂಗಿಕವಾಗಿ ಸಂಭ್ರಮಿಸುವಾಗ ಒಂದಿಷ್ಟು ಪ್ರೀತಿಯೊಡನೆ ಒಂದು ಬೊಗಸೆಯಷ್ಟು ಆತ್ಮವಿಶ್ವಾಸವೂ ತುಂಬಿಕೊಂಡಿದ್ದರೆ ಕಾಮನೆ ಕೆರಳಿಸಲು ಮತ್ತು ಮಿಲನ ವಿಜೃಂಭಿಸಲು ಹೆಚ್ಚಿನ ಪ್ರಯತ್ನ ಪಡಬೇಕಾಗಿಲ್ಲ. ನಿಮ್ಮಲ್ಲಿ ನಿಮಗೆ ವಿಶ್ವಾಸವಿದ್ದರೆ ಆಯಿತು. ಇನ್ನೇಕೆ ತಡ, ಪ್ರತಿ ರಾತ್ರಿಯೂ ನಿಮ್ಮ ಬಾಳಲ್ಲಿ ಮೊದಲ ರಾತ್ರಿಯಾಗಲಿ.