ಈ ಸಂಗತಿಯನ್ನು ವಿಜ್ಞಾನಿಗಳು ಅನೇಕ ಪ್ರಯೋಗಗಳನ್ನು ಮಾಡಿ, ಜೋಡಿಗಳನ್ನು ಪ್ರಯೋಗಕ್ಕೆ ಒಡ್ಡಿ, ಸಾಕಷ್ಟು ಅಧ್ಯಯನ ನಡೆಸಿದ ನಂತರ ಕಂಡುಕೊಂಡಿರುವ ಸತ್ಯ ಸಂಗತಿ. ಇದನ್ನು ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಜೀವನ ಸುಂದರವಾಗಿರಲೆಂದೇ ಆಶಿಸಿ ಇಂಥ ಅಂಶಗಳನ್ನು ನಂಬಬೇಕಾಗುತ್ತದೆ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.
ತೃಪ್ತಿಯಾಗುವಂತೆ ರತಿಕ್ರೀಡೆಯಲ್ಲಿ ತಲ್ಲೀನರಾದರೆ ದೇಹದಲ್ಲಿ ಇಮ್ಯೂನೋಗ್ಲೋಬುಲಿನ್ ಎ ಎಂಬ ಆಂಟಿಬಾಡಿಗಳು ದೇಹದಲ್ಲಿ ಹೆಚ್ಚು ಉತ್ಪತ್ತಿಯಾಗಿ ಸಾಮನ್ಯ ಶೀತ ಮತ್ತಿತರ ಸೋಂಕು ರೋಗಗಳಿಂದ ಮುಕ್ತಿ ನೀಡುತ್ತವೆ. ಮಿಲನ ಮಹೋತ್ಸವ ನಿರಂತರವಾಗಿದ್ದರೆ ಮತ್ತು ಆನಂದ ತರುತ್ತಿದ್ದರೆ ಮಾತ್ರ ಇದರ ಲಾಭ ಪಡೆಯಲು ಸಾಧ್ಯ.
ಕನಿಷ್ಠ ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆ ನಡೆಸದೆ ತಿಂಗಳಿಗೊಂದು ಬಾರಿ ಅಥವಾ ಬಲವಂತದ ಮಾಘಸ್ನಾನ ಮಾಡಿದಂತೆ ಸಂಭೋಗದಲ್ಲಿ ತೊಡಗಿದರೆ ದೇಹಕ್ಕೆ ಸುಸ್ತಾಗುತ್ತದೆ. ವರ್ಷಕ್ಕೆ ಒಂದೇ ಬಾರಿ ಹತ್ತು ಕಿ.ಮೀ. ನಡೆಯುವವರಿಗೂ ದಿನನಿತ್ಯ ಐದು ಕಿ.ಮೀ. ಬೆಳಿಗ್ಗೆ ಉತ್ತಮ ಹವಾ ಸೇವನೆ ಮಾಡುವವರಿಗೂ ವ್ಯತ್ಯಾಸವಿರುವುದಿಲ್ಲವೆ? ಹಾಗೆ.