ಎಲ್ಲಕ್ಕಿಂತ ಹೆಚ್ಚಾಗಿ ಲೈಂಗಿಕತೆಯಿಂದ ಹಾಗಾಗತ್ತೆ ಹೀಗಾಗತ್ತೆ ಎನ್ನುವ ಚಿಂತೆಯನ್ನು ದೂರ ಮಾಡಬೇಕು. ಕಾಮಕ್ರೀಡೆಯೆಂಬುದು ಮನಸ್ಸಿಗಿಂತ ದೇಹಕ್ಕೆ ಸಂಬಂಧಿಸಿದ ಚಟುವಟಿಕೆ. ದೇಹಗಳು ಒಂದಕ್ಕೊಂದು ಬೆಸೆದಾಗ ದೇಹದಲ್ಲಿ ರಕ್ತದ ಹರಿವು ವೇಗಗೊಂಡು ಹೃದಯಕ್ಕೆ ಹೆಚ್ಚಿನ ಕೆಲಸ ನೀಡುತ್ತದೆ. ಅರ್ಧ ಗಂಟೆ ನಡೆದಾಗ ಅಥವಾ ವ್ಯಾಯಾಮ ಮಾಡಿದಾಗ ಕೂಡ ಹೃದಯ ಇದೇ ರೀತಿ ಹೆಚ್ಚಿನ ಡ್ಯೂಟಿ ಮಾಡಬೇಕಾಗುತ್ತದೆ. ಇದು ಹೃದಯಕ್ಕೇ ಒಳ್ಳೆಯದು.
ವಿಜ್ಞಾನಿಗಳ ಪ್ರಕಾರ, ತಿಂಗಳಿಗೊಂದು ಬಾರಿ ಅಥವಾ ತಿಂಗಳಿಗೆ ಎರಡು ಬಾರಿ ಪ್ರೇಮ ಸಲ್ಲಾಪದಲ್ಲಿ ತೊಡಗುವವರ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿರುತ್ತದೆ. ಇದು ನಿಯಮಿತವಾಗಿ ಕೇಳಿಯಲ್ಲಿ ಭಾಗವಹಿಸುವವರಿಗೆ ಇರುವುದಿಲ್ಲ. ಹೃದಯವೇ ಲೈಂಗಿಕ ಚಟುವಟಿಕೆಗೆ ಹೊಂದಿಕೊಂಡಿರುತ್ತದೆ. ಹೃದಯ ಸ್ವಾಸ್ಥ್ಯದಿಂದ ಇರಬೇಕಿದ್ದರೆ ಲೈಂಗಿಕ ಚಟುವಟಿಕೆಯೂ ನಿಯಮಿತವಾಗಿ ಚಲಾವಣೆಯಲ್ಲಿರಲಿ.
ಏಕಾಂಗಿಗಳಾಗಿ ಬಾಳುವೆ ಮಾಡುವವರಿಗಿಂತ ಮದುವೆಯಾಗಿ ಸಂಗಾತಿಯೊಡನೆ ಸುಖಜೀವನ ನಡೆಸುವವರ ಹೃದಯ ಸ್ವಾಸ್ಥ್ಯವೂ ಚೆನ್ನಾಗಿರುತ್ತದೆ ಮತ್ತು ಲೈಂಗಿಕ ಜೀವನವೂ ಸುಖಮಯವಾಗಿರುತ್ತದೆ. ಇವು ಒಂದಕ್ಕೊಂದು ಹೊಂದಿಕೊಂಡಿರುವ ಬದುಕಿನ ಭಾಗ. ಲೈಂಗಿಕ ಚಟುವಟಿಕೆಗಳು ದಂಪತಿಗಳನ್ನು ಭಾವನಾತ್ಮಕವಾಗಿಯೂ ಸದೃಢರನ್ನಾಗಿರುತ್ತವೆ. ಸೋ, ಎಲ್ಲ ಚಿಂತೆ ಬಿಟ್ಟು ಒಂದಾಗಿರಿ, ಹೃದಯವೂ ಲವ್ ಲವ್ ಎನ್ನುತಿರಲಿ.