ಮಿಲನ ಮಹೋತ್ಸವ ಸಂಭವಿಸುವ ಆ ಕ್ಷಣದಲ್ಲಿ ರಕ್ತದ ಸಂಚಾರ ವೇಗ ಪಡೆದರೂ, ದೀರ್ಘಾವಧಿಯಲ್ಲಿ ಲೈಂಗಿಕ ಚಟುವಟಿಕೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಬಯಾಲಾಜಿಕಲ್ ಸೈಕಾಲಜಿ ಎಂಬ ಸಂಶೋಧನಾತ್ಮಕ ಪುಸ್ತಕದಲ್ಲಿ ಇದು ನಮೂದಾಗಿದೆ. ಹಾಗೆಯೆ, ಅನೇಕ ಪ್ರಯೋಗಗಳ ಮುಖಾಂತರ ಕೂಡ ವಿಜ್ಞಾನಿಗಳು ಇದನ್ನು ದೃಢೀಕರಿಸಿದ್ದಾರೆ.
ಕಾಮಕ್ರೀಡೆಯೆಂಬುದು ಎರಡು ದೇಹಗಳ ಮಿಲನ ಮಾತ್ರವಲ್ಲ, ಅದು ಎರಡು ದೇಹದ ಉಸಿರು, ಎರಡು ಹೃದಯ, ಎರಡು ಮನಸುಗಳು ಮಿಲನವಾಗುವ ಸಂಭ್ರಮದ ಶುಭಗಳಿಗೆ. ಎರಡು ಬೆತ್ತಲೆ ದೇಹಗಳು ಬೆಸೆಯುವ ಸಂದರ್ಭ ಹೆಣ್ಣಿನಲ್ಲಿ ರಕ್ತದೊತ್ತಡ ಮಾತ್ರವಲ್ಲ ಮಾನಸಿಕ ಒತ್ತಡಕ್ಕೆ ಕೂಡ ಲಗಾಮು ಬಿದ್ದಿರುತ್ತದೆ.
ಗಂಡ ಹೆಂಡತಿ ಕೂಡಿಕೊಳ್ಳುವ ಆ ಘಳಿಗೆ ಮನಸ್ಸನ್ನು ಉಲ್ಲಾಸದಿಂದ ಇಟ್ಟಿರುತ್ತದೆ. ಈ ಲೋಕದ ಎಲ್ಲ ಜಂಜಡಗಳು ಮರೆತು ಮನಸುಗಳು ಹಾರುವ ಹಕ್ಕಿಯಂತಾಗಿರುತ್ತವೆ. ಬಾಹ್ಯಲೋಕದಲ್ಲಿ ಕತ್ತಲಾಗಿದ್ದರೆ, ಅಂತರಂಗದಲ್ಲಿ ಬೆಳಕು ಮೂಡಿರುತ್ತದೆ. ಹೀಗಾಗಿ, ಎಲ್ಲ ಒತ್ತಡಗಳನ್ನು ಬರಿದುಮಾಡಿಕೊಂಡು ಮಿಲನ ಮಹೋತ್ಸವ ಆಚರಿಸಿರಿ. ಹೃದಯ ಆರೋಗ್ಯವಂತವಾಗಿರಲಿ.