ಹೌದು, ಅತ್ಯಂತ ಸೂಕ್ಷ್ಮವಾಗಿರುವ ಈ ಭಾಗವೇ ಜಿ-ಸ್ಪಾಟ್. ಸತತ ಅರುವತ್ತು ವರ್ಷಗಳ ಸುದೀರ್ಘ ಸಂಶೋಧನೆ ನಡೆಸಿದ ನಂತರ, ಜಿ-ಸ್ಪಾಟ್ ಎಂಬ ಭಾಗ ಮಹಿಳೆಯಲ್ಲಿ ಇಲ್ಲವೇ ಇಲ್ಲ ಎಂದು ಅಮೆರಿಕಾದ ವಿಜ್ಞಾನಿಗಳು ಪ್ರಮಾಣ ಮಾಡಿ ಹೇಳಿದ್ದಾರೆ. ತಮ್ಮಲ್ಲಿ ಜಿ-ಸ್ಪಾಟ್ ಖಂಡಿತ ಇದೆ ಎಂದು ನಂಬಿದ್ದ ಮಹಿಳಾಮಣಿಗಳು ನಗುವುದೋ ಅಳುವುದೋ ಎಂದು ಕಕ್ಕಾಬಿಕ್ಕಿಯಾಗಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದ ಸಂಶೋಧಕರ ತಂಡ ಸಾಕಷ್ಟು ಸಮೀಕ್ಷೆ ಮಾಡಿ, ಫೋಟೋಗಳನ್ನು ತೆಗೆದು, ಗುಪ್ತಾಂಗದ ಆ ಭಾಗದ ಬಯೋಪ್ಸಿ ನಡೆಸಿ ಕೊನೆಗೆ ಅಂಥದೊಂದು ಭಾಗವೇ ಇಲ್ಲ ಎಂದು ಷರಾ ಬರೆದಿದ್ದಾರೆ. "ಯಾವುದೇ ಸಂಶಯವೇ ಇಲ್ಲ. ಜಿ-ಸ್ಪಾಟ್ ಎಂಬ ತೆಳುವಾದ ಗೋಡೆ ಇಲ್ಲ" ಎಂದು ಸಂಶೋಧಕರು ಖಡಾಖಂಡಿತವಾಗಿ ಹೇಳಿದ್ದಾರೆ.
ಈ ಜಿ-ಸ್ಪಾಟ್ ಎಂಬ ಯೋನಿಯಲ್ಲಿನ ಗೋಡೆಯನ್ನು ಕಂಡುಹಿಡಿದಿದ್ದು, ಡಾ. ಅರ್ನಸ್ಟ್ ಗ್ರಾಫೆನ್ಬರ್ಗ್ ಎಂಬ ಸಂಶೋಧಕ. ಆ ಸಂಶೋಧನೆಯ ಗೌರವಾರ್ಥವಾಗಿ ಆ ಸಂವೇದನಾಶೀಲ ಜಾಗಕ್ಕೆ ಜಿ-ಸ್ಪಾಟ್ ಎಂದು ನಾಮಕರಣ ಮಾಡಲಾಯಿತು. ಅದಾದ ಮೇಲೆ ಜಿ-ಸ್ಪಾಟ್ ಹಿಂದೆ ಬಿದ್ದ ಸೆಕ್ಸಾಲಾಜಿಸ್ಟ್ ಗಳು ಅದರ ಗುಣಗಳ ಬಗ್ಗೆ ಬರೆದದ್ದೇ ಬರೆದದ್ದು.
ತಮಾಷೆಯ ಸಂಗತಿಯೆಂದರೆ, ಜಿ-ಸ್ಪಾಟಿನ ಬಗ್ಗೆ ಗ್ರಾಫೆನ್ಬರ್ಗ್ ಪೇಟೆಂಟ್ ಪಡೆದಿದ್ದಾನಾದರೂ, ಇದರ ಕುರಿತು ಭಾರತದ ಲೈಂಗಿಕ ಗ್ರಂಥ ಕಾಮಸೂತ್ರ ಮತ್ತು 11ನೇ ಶತಮಾನದ ಜಯಮಂಗಲ ಶಾಸನಗಳಲ್ಲಿ ಜಿ-ಸ್ಪಾಟ್ ಬಗ್ಗೆ ಉಲ್ಲೇಖವಾಗಿದೆ. ಶೇ.29ರಷ್ಟು ಮಹಿಳೆಯರು ತಮಗೆ ಅಂಥದೊಂದು ಸುಖನೀಡುವ ಭಾಗವಿದೆಯೆಂದೇ ನಂಬಿದ್ದಾರೆ. ಈಗ ಅದು ಇದೆಯೆಂದು ಸಾರಲು ಮತ್ತೊಂದು ಸಂಶೋಧಕರ ತಂಡ ಟೊಂಕಕಟ್ಟಬೇಕಿದೆ.