•  

ಮಹಿಳೆಯರಲ್ಲಿ ಸಂಭೋದ್ರೇಕದ ಪರಾಕಾಷ್ಠೆ

Array
How to achieve orgasm?
 
ಗಂಡು ಹೆಣ್ಣೆಂಬ ಎರಡು ಚಕ್ರಗಳ ರಥ ಸರಾಗವಾಗಿ ಸಾಗಲು ಸಾಮರಸ್ಯದ ಜೊತೆಗೆ ಲೈಂಗಿಕ ಸಂತೃಪ್ತಿಯೂ ಮುಖ್ಯ. ಎಷ್ಟೋ ಬಾರಿ ತಿಳಿವಳಿಕೆಯ ಕೊರತೆಯಿಂದ ಮಹಿಳೆಯರಲ್ಲಿ ಸುಖದ ತುತ್ತತುದಿ ಮುಟ್ಟಲು ಸಾಧ್ಯವಾಗುವುದೇ ಇಲ್ಲ. ಗಂಡಸಿಗೆ ಲೈಂಗಿಕ ತೃಪ್ತಿಯ ಪರಾಕಾಷ್ಠೆ ಮುಟ್ಟುವುದು ಎಷ್ಟು ಮುಖ್ಯವೋ ಹೆಣ್ಣಿಗೂ ಅಷ್ಟೇ ಮುಖ್ಯ. ಎಷ್ಟೇ ಪ್ರಯತ್ನಪಟ್ಟರೂ ಹೆಂಗಸರಿಗೆ ಲೈಂಗಿಕ ಸುಖ ಅನುಭವಿಸುವುದು ಕನ್ನಡಿಯ ಗಂಟಾಗಿ ಉಳಿದುಬಿಡುತ್ತದೆ. ಗಂಡ ಹೆಂಡತಿ ಕುಳಿತು ಈ ಕುರಿತು ಮನಬಿಚ್ಚಿ ಚರ್ಚಿಸಿದಾಗ ಸಮಸ್ಯೆಗೆ ಪರಿಹಾರ ಸಾಧ್ಯ. ಇಲ್ಲದಿದ್ದರೆ, ಇದು ಮನಸಿನ ಹತಾಶೆ, ಖಿನ್ನತೆ, ಸಿಟ್ಟು ಸೆಡುವು, ಆರೋಗ್ಯದ ಏರುಪೇರಿಗೂ ದಾರಿ ಮಾಡಿಕೊಡಬಹುದು. ಮಾತುಕತೆಯಿಂದ ಸಾಧ್ಯವಾಗದೇ ಇದ್ದಾಗ ಯಾವುದೇ ಮುಜುಗರವಿಲ್ಲದೆ ತಜ್ಞ ಲೈಂಗಿಕ ವೈದ್ಯರನ್ನು ಸಂಪರ್ಕಿಸುವುದು ಜಾಣೆಯರ ಲಕ್ಷಣ.

ಹೆಣ್ಣಿಗೆ ಲೈಂಕಿಕತೆಯ ಪರಾಕಾಷ್ಠೆ ತಲುಪಲು ನಾನಾ ಮಾರ್ಗಗಳಿವೆ. ಈ ಮಾರ್ಗಗಳ ಕುರಿತು ಸಂಕ್ಷಿಪ್ತ ವಿವರಗಳು ಇಲ್ಲಿವೆ.

ಸ್ಖಲನದ ಆನಂದ ಪಡೆಯುವ ಬಗೆ

* ಸ್ತ್ರೀ ಮರ್ಗಾಂಗದ ಉದ್ದೀಪನ ಅಥವಾ ಉದ್ರೇಕಗೊಳಿಸುವುದರಿಂದ.
* ಸ್ತ್ರೀಪುರುಷರ ಸಂಭೋಗದಿಂದ, ಮೌಖಿಕ ಮೈಥುನ, ಹಸ್ತಮೈಥುನ ಅಥವಾ ಇನ್ನಿತರ ಸಂಭೋಗರಹಿತ ಕ್ರಿಯೆಗಳಿಂದ.
* ಸ್ತನತೊಟ್ಟು ಅಥವಾ ಹೆಣ್ಣಿಗೆ ಸುಖ ನೀಡುವ ಅವಯವವನ್ನು ತಡುವುದರಿಂದ.
* ರಾತ್ರಿ ಕಾಣುವ ಹಿತಕರವಾದ ಸ್ವಪ್ನದಿಂದ ಸ್ಖಲನ ಸಾಧ್ಯ.
* ಜಿ-ಸ್ಪಾಟ್ ಎಂದು ಕರೆಯಲಾಗುವ ಮರ್ಮಾಂಗದ ಭಾಗವನ್ನು ಉದ್ರೇಕಗೊಳಿಸುವುದರಿಂದ.

ಸ್ತ್ರೀ ಸ್ಖಲನದತ್ತ ಒಂದು ನೋಟ

* ಗಂಡಸರಿಂತ ಹೆಂಗಸರಲ್ಲಿ ಸಂಭೋದ್ರೇಕದ ಪರಾಕಾಷ್ಠೆ ಹೆಚ್ಚು.
* ಸಂಭೋದ್ರೇಕ ಮುಟ್ಟುವ ಮೊದಲು ಮರ್ಮಾಂಗ ಗಡುಸಾಗುತ್ತದೆ ಮತ್ತು ಸ್ರವಿಸುವಿಕೆ ಪ್ರಾರಂಭವಾಗುತ್ತದೆ.
* ಸಂಭೋದ್ರೇಕ ತಲುಪುವ ಕೆಲ ಕ್ಷಣ ಮುನ್ನ ಮರ್ಗಾಂಗ ಬಿಗಿಯಾಗುತ್ತದೆ ಮತ್ತು ಆಂತರಿಕ ದ್ವಾರ ಹಿಗ್ಗುತ್ತದೆ.
* ನಂತರ ಹೊಟ್ಟೆಯ ಭಾಗದ ಸ್ನಾಯುಗಳು ತಾನಾಗೇ ಬಿಗಿದುಕೊಳ್ಳುತ್ತವೆ.
* ಪೂರ್ಣ ಸುಖದ ತುತ್ತತುದಿ ತಲುಪಿದಾಗ ಪೃಷ್ಠ, ಮರ್ಮಾಂಗ, ಹೊಟ್ಟೆ, ಪೆಲ್ವಿಕ್ ಭಾಗದ ಸ್ನಾಯುಗಳು ತಾಳಬದ್ಧವಾಗಿ ಹಿರಿಕಿರಿದಾಗುತ್ತವೆ.

ಸಂಭೋಗ ಅಥವಾ ಕಾಮೋದ್ರೇಕದ ಗಿರಿ ತಲುಪಿದ ನಂತರವೂ ಸ್ತ್ರೀ ಎರಡನೇ ಬಾರಿ ಸ್ಖಲನದಿಂದ ಸುಖ ಅನುಭವಿಸಬಹುದು. ಕೆಲವರಿಗೆ ಎರಡನೆಯ ಸಂಭೋದ್ರೇಕವೇ ಅತ್ಯಂತ ಹಿತಕಾರಿಯಾಗಿರುತ್ತದೆ. ಆದರೆ, ಮರ್ಮಾಂಗ ಅಥವಾ ಸ್ತನ ಸೂಕ್ಷ್ಮವಾಗಿದ್ದರೆ ಎರಡನೆಯ ಪ್ರಯತ್ನ ಅಹಿತಕರವಾಗಿರಬಹುದು.

ಇದರ ಬಗ್ಗೆ ಅಥವಾ ಲೈಂಗಿಕತೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ಹಿಂಜರಿಕೆಯಿಲ್ಲದೆ ದಟ್ಸ್ ಕನ್ನಡ ವೈದ್ಯರನ್ನು ಸಂಪರ್ಕಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

English summary
The most common way of achieving orgasm in women is by the stimulation of clitoris.
Story first published: Tuesday, January 26, 2010, 13:38 [IST]

Get Notifications from Kannada Indiansutras