ಮಂಡಳಿಯು 15 ರಿಂದ 29 ವರ್ಷ ವಯಸ್ಸಿನ ಸುಮಾರು 58,000 ಯುವಕರನ್ನು ಆಧಾರವಾಗಿಟ್ಟುಕೊಂಡು ನಡೆಸಿದ ಈ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. ಸಮೀಕ್ಷೆಗೆ ಒಳಪಡಿಸಿದ ವಿವಾಹಪೂರ್ವ ಲೈಂಗಿಕತೆಯಲ್ಲಿ ಪಾಲ್ಗೊಂಡ ಯುವಕರಲ್ಲಿ ಕೇವಲ ಶೇ.13ರಷ್ಟು ಕಾಂಡೋಮ್ ಬಳಕೆ ಮಾಡುತ್ತಾರೆ. ಯುವತಿಯರ ಪೈಕಿ ಶೇ. 3ರಷ್ಟು ಮಾತ್ರ.
ಸರಿಯಾದ ಅಳತೆಯ ಕಾಂಡೋಮ್ ಮತ್ತು ಕಾಂಡೋಮ್ ಪೂರೈಕೆಯ ಕೇಂದ್ರಗಳಿಂದ ಕೇಳಿ ಪಡೆಯಲು ಮುಜುಗರ ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ಸರಕಾರದಿಂದ ಸೂಕ್ತವಾದ ತಿಳಿವಳಿಕೆ ಕೊರತೆಯೇ ಕಾಂಡೋಮ್ ಬಳಿಕೆ ಕಡಿಮೆಯಾಗಿರುವುದಕ್ಕೆ ಮೂಲ ಕಾರಣಗಳು ಎಂದು ಸಮೀಕ್ಷೆ ಹೇಳಿದೆ.