•  

ಹೆಂಗಳೆಯರ ಮನ ಗೆಲ್ಲುವುದು ಹೇಗೆ?

Array
How to impress a woman
 
ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಹಾಗೂ ಪ್ರಣಯ ಅವಶ್ಯಕ. ಪ್ರತಿಯೊಬ್ಬ ಪುರುಷನು ಚೆಂದದ ಹುಡುಗಿಯೊಬ್ಬಳು ನನ್ನವಳಾಗಬೇಕು ಎಂದು ಹಾತೊರೆಯುವುದು ಸಹಜ. ಆದರೆ, ಎಲ್ಲ ರೀತಿಯಿಂದಲೂ ಸುಂದರವಾದ ಯುವತಿ ಸಿಗುವುದು ಹೇಗೆ ಕಷ್ಟವೋ, ಅದೇ ರೀತಿ ಸಿಕ್ಕ ಯುವತಿಯನ್ನು ಪಳಗಿಸಿ, ನಿಮ್ಮವಳಾಗಿಸಿಕೊಳ್ಳುವುದು ಸುಲಭದ ಮಾತಲ್ಲ. ಮೀನಿನ ಹೆಜ್ಜೆ ಕಾಣುವುದಿಲ್ಲ, ಹೆಣ್ಣಿನ ಮನಸ್ಸನ್ನು ಅರಿತವರಿಲ್ಲ ಎಂಬುದು ಅಕ್ಷರಶಃ ಸತ್ಯ. ಅದರಲ್ಲೂ ಇಂದಿನ ಯುಗದ ಯುವತಿಯರು "ಈ ಶತಮಾನದ ಮಾದರಿ ಹೆಣ್ಣು... ಎಂದು ಆರತಿ ರೀತಿ ಹಾಡುತ್ತಾ ತಿರುಗುತ್ತಿರುತ್ತಾರೆ. ಸೌಂದರ್ಯ ಹಾಗೂ ಬುದ್ಧಿವಂತಿಕೆಯ ಪ್ರತೀಕವಾದ ಆಧುನಿಕ ನಾರಿಯ ಮನಗೆಲ್ಲುವುದು ಎಂಥವರಿಗೂ ಕಷ್ಟದ ಕೆಲಸವೇ ಸೈ.ಮಹಿಳೆಯರ ಮನ ಗೆಲ್ಲುವ ಸರಳ ಸುಲಭ ತಂತ್ರಗಳನ್ನು ಪ್ರಯತ್ನಿಸಿ ಫಲ ಕಾಣಬಹುದು. ಆದರೆ, ಇದೆಲ್ಲಾ ಪರೀಕ್ಷಿಸಿ, ಪ್ರಮಾಣೀಕರಿಸಿದ ಸಲಹೆಗಳೆಂದು ಹೇಳಲಾಗುವುದಿಲ್ಲ. ಕನಸಿನ ಕನ್ಯೆಯ ಮನದನ್ನೆ ಮಾಡಿಕೊಳ್ಳುವ ಹಂಬಲಕ್ಕೆ ಬೆಂಬಲವಾಗಿರಲೆಂದಷ್ಟೆ ಈ ಸಲಹೆಗಳನ್ನು ನೀಡಲಾಗಿದೆ. ಹದಿನಾರರ ಹರೆಯದ ಹುಚ್ಚುಕೋಡಿ ಮನಸ್ಸುಗಳಿಗೆ ಈ ಸಲಹೆ ಅವರ ನೆಚ್ಚಿನ ಹೀರೋ ಹೀರೋಯಿನ್ ಆಣೆಗೂ ಮೆಚ್ಚುಗೆಯಾಗದು ಇದು ಸತ್ಯ ಸತ್ಯ.* ಮೊಟ್ಟಮೊದಲಿಗೆ ಆಕೆಯ ಚಲನವಲನದ ಮೇಲೆ ನಿಗಾ ಇರಿಸಬೇಕು. ಹಾಗಂತಾ, ಗ್ರೇಟ್ ವಿಲನ್ ವಜ್ರಮುನಿ ಥರಾ ಆಕೆಯನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದರೆ ಕೆಲಸ ಕೆಡುತ್ತದೆ. ಅಕೆಯ ಗೆಳೆತನ ಸಿಕ್ಕರೆ, ನಿಮ್ಮ ಅರ್ಧ ಕೆಲಸವಾದಂತೆ. ಹುಡುಗಿಯರಿಗೆ ತಮ್ಮ ಮಾತು ಕೇಳುವ ಹುಡುಗರೇ ಅಚ್ಚುಮೆಚ್ಚು. ಸೋ, ದೇವರು ಕೊಟ್ಟಿರುವ ಎರಡು ಕಿವಿಯಲ್ಲಿ ಬಳಸಿ, ಆಕೆಗೆ ಮಾತಾಡಲು ಬಿಡಿ. ಆದರೆ, ತಾಳ್ಮೆಯಿಂದ ವಿಷಯವನ್ನು ಕಷ್ಟಪಟ್ಟರೂ ಕೇಳಿಸಿಕೊಳ್ಳುವುದು ಮುಖ್ಯ. ಸುಮ್ಮನೆ ನಾಟಕವಾಡಿದರೆ, ಅಷ್ಟೇ ಮತ್ತೆ ಅವಳತ್ತ ನೀವು ಸುಳಿಯಲು ಸಾಧ್ಯವಾಗುವುದಿಲ್ಲ. * ಆಕಾರದಲ್ಲಿ ನೀವು ಹೇಗೆ ಇದ್ದರೂ, ಶುಭ್ರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಯಾವುದೋ ಸಿನಿಮಾದಲ್ಲಿ ಹೀರೋಯಿನ್ ರೌಡಿನ ಮೆಚ್ಚಿದಳು ಅಂದ್ರೆ ನಿಜ ಅನ್ನೋಕೆ ಆಗೋಲ್ಲ. ಹುಡುಗಿಯರು ಸಾಫ್ಟ್ ನೆಚರ್ ವುಳ್ಳ ಹುಡುಗರನ್ನು ಮೆಚ್ಚುವುದು ಸಾಮಾನ್ಯ. ನೀಟ್ ಆಗಿ ಶೇವ್ ಮಾಡಿಕೊಂಡು ರೇಮಂಡ್ ಸ್ಯೂಟಿಂಗ್ಸ್ ಮಾಡೆಲ್ ರೀತಿ ಆಕೆ ಮುಂದೆ ನಿಂತರೆ ಖಂಡಿತಾ ನಿಮಗೆ ಜಯ. ಆದರೆ ಓವರ್ ಆಗಿ ಕರಿಯಾ ಸಿನಿಮಾದಲ್ಲಿ ದರ್ಶನ್ ರೀತಿಯಲ್ಲಿ ಬಂದ ಹಾಗೆ ಬಂದರೆ ನಗೆಪಾಟಲಾಗುತ್ತೀರಿ ಜೋಕೆ. ಸರಳ, ಸುಂದರಾಂಗನಿಗೆ ಬೇಗ ನಾರಿ ಒಲಿಯುವಳು. ಹೊಗಳಿಕೆಗೆ ಬೀಳದ ಪ್ರಾಣಿಯೇ ಇಲ್ಲ. ಸಮಯ ಸಿಕ್ಕಾಗಲೆಲ್ಲಾ ಆಕೆಯನ್ನು ಹೊಗಳುತ್ತಿರಿ. ಆದರೆ, ಅದೆ ಅಭ್ಯಾಸವಾಗಬಾರದು. ನೀನು ಬಿಡಮ್ಮಾ ಸಕತ್ ಸ್ಮಾರ್ಟ್ ಯಾವ ಲೆಕ್ಕ/ ಕೋಡ್/ವರ್ಕ್ ಕೊಟ್ರು ನಿಮಿಷದಲ್ಲೇ ಮಾಡಿಬಿಡ್ತೀಯಾ ಅಂದ್ರೆ ಎಂಥಾ ಕೆಟ್ಟ ಕೆಲಸಗಾರ್ತಿಯಾದರೂ ಆಕೆ ನಿಮ್ಮ ಹೊಗಳಿಕೆಯ ಅಟ್ಟ ಏರದೇ ಇರಲಾರಳು. * ನಗು ಅತ್ಯುತ್ತಮ ಔಷಧ. ಜಾಣ್ಮೆಯಿಂದ ನಗೆಹನಿಗಳನ್ನು ಆಕೆಯತ್ತ ತೇಲಿಬಿಡಿ. ಪೋಲಿ ಜೋಕುಗಳು, ಇನ್ನೊಬ್ಬರನ್ನು ತೆಗಳುವ ಜೋಕುಗಳು ಬೇಡವೇ ಬೇಡ. ನಿಮ್ಮನ್ನು ಬೇಕಾದರೇ ತೆಗಳಿಕೊಳ್ಳಿ ನೋ ಪ್ರಾಬ್ಲಂ. ಜೋಕುಗಳು ಗೊತ್ತಿಲ್ಲವೆಂದರೆ ಪೆಚ್ಚುಮೋರೆ ಹಾಕಿಕೊಂಡು ಕೂಡಬೇಡಿ. ಮುಖದಲ್ಲಿ ಸದಾ ಮಂದಹಾಸ ಇರಲಿ. * ಜಂಟಲ್ ಮ್ಯಾನ್ ರೀತಿ ವರ್ತಿಸಿ. ಯಾವುದೇ ಸಂದರ್ಭದಲ್ಲಾದರೂ ಆಕೆಯನ್ನು ಸಾರ್ವಜನಿಕವಾಗಿ ತೆಗಳುವುದು, ಬೈಯುವುದು ಮಾಡಬೇಡಿ. ಒರಟಾಗಿ ವರ್ತಿಸಿದರೆ ನಿಮ್ಮಿಂದ ಆಕೆಗೆ ದೂರ ದೂರ ಹೋಗುತ್ತಾಳೆ. ಆಕೆಗೆ ಸಹಾಯ ಬೇಕಾದಾಗ ತಪ್ಪದೇ ಸಹಕಾರ ನೀಡಿ. ಆಕೆಗೆ ಏನೋ ಹೆಲ್ಪ್ ಮಾಡಿದೆ ಎಂಬ ಆಹಂ ಬೆಳಸಿಕೊಂಡು ಸ್ನೇಹಿತರ ಮುಂದೆ ಇದನ್ನೇ ಹೇಳುತ್ತಾ ಕೊಚ್ಚಿಕೊಳ್ಳಬೇಡಿ. ಸಹಾಯ ಬಯಸಿದ ಹೆಣ್ಣಿಗೆ ನಿಮ್ಮ ಕಾಮ ವಾಸನೆ ಬಡಿದರೆ ಸ್ನೇಹ, ಪ್ರೇಮ, ಮದುವೆ ಬಂಧನ ಎಲ್ಲವೂ ಆ ಕ್ಷಣವೇ ಭಸ್ಮವಾಗುತ್ತದೆ. ಕಾಮುಕ ಭಾವನೆಯಿಂದ ನೋಡುವುದು ತರವಲ್ಲ. * ಒಟ್ಟಿನಲ್ಲಿ ಒಂದಿಷ್ಟು ತಾಳ್ಮೆ, ಜಾಣ್ಮೆ, ಆತ್ಮವಿಶ್ವಾಸವಿದ್ದರೆ ಆಕೆ ನಿಮ್ಮ ಪ್ರಾಣಸಖಿಯಾಗುತ್ತಾಳೆ. ನಿಮ್ಮಿಂದ ಆಕೆಗೆ ಯಾವುದೇ ರೀತಿ ಅಪಾಯವಿಲ್ಲ ಎಂದು ಅರಿತರೆ ನಿಮ್ಮ ಅರ್ಧ ಕೆಲಸ ಆದ್ದಂತೆ. ಆತುರಾತುರವಾಗಿ ನೀನು ನನ್ನ ಗೆಳತಿಯಾಗಲೇಬೇಕು ಎಂದು ಹಠ ಹಿಡಿಯುವುದು ಬೇಡ. ನಿಮ್ಮ ಬಗ್ಗೆ ಸದಭಿಪ್ರಾಯ ಉಂಟಾದರೆ ನೀವು ಆಕೆಯನ್ನು ಗಮಿಸುವುದಕ್ಕಿಂತ ಹೆಚ್ಚು, ಆಕೆಯೇ ನಿಮ್ಮನ್ನು ಎರಡೆರಡು ಬಾರಿ ಪರೀಕ್ಷಾರ್ಥವಾಗಿ ಗಮಿಸುತ್ತಿರುತ್ತಾಳೆ. ಹೆಣ್ಣು ಗಂಡು ಪರಸ್ಪರ ಆಕರ್ಷಣೆಗೆ ಒಳಗಾಗುವುದು ಸಹಜವಾದರೂ, ಸ್ನೇಹ ಸಂಪಾದನೆ ಹಾಗೂ ಎಂದಿಗೂ ಅಳಿಯದ ಗೆಳೆತನ ಸಿಗುವುದು ಕಷ್ಟ. ಒಂದಂತೂ ನೆನಪಿಡಿ, ನೀವು ಯಾರನ್ನಾದರೂ ಪ್ರೀತಿಸತೊಡಗಿದರೆ, ನಿಮ್ಮ ಜೀವನದಲ್ಲಿ ಉತ್ತಮವಾದ ಬೆಳವಣಿಗೆಗಳಾವುದಂತೂ ಖಂಡಿತಾ. ಆದರೆ, ಅದನ್ನು ಸರಿ ಹಾದಿಯಲ್ಲಿ ನಡೆಸಿಕೊಂಡುವುದು ಸಹಾ ಅಷ್ಟೇ ಮುಖ್ಯ.
English summary
How To impress a woman is sometimes difficult for a few men. Attracting women should be done in a subtle way. Love and romance is what everyone wants once in a lifetime. To find that perfect woman can be a very difficult task for anyone who wants to find love.

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more