•  

ಸೂರ್ಯಸ್ನಾನದಿಂದ ಪುರುಷರಲ್ಲಿ ವೀರ್ಯ ವೃದ್ಧಿ

Array
Men need to sunbathe
 
ಯಸ್. ಸೂರ್ಯ ಸ್ನಾನದಿಂದ ಪುರುಷರಲ್ಲಿ ವೀರ್ಯ ವೃದ್ಧಿಯಾಗುತ್ತದೆ ಎನ್ನುತ್ತದೆ ಅಧ್ಯಯನವೊಂದು. ದೇಹವನ್ನು ಸೂರ್ಯನ ರಶ್ಮಿಗಳಿಗೆ ಒಡ್ಡಿದಾಗ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಅದು ಪುರುಷರಲ್ಲಿನ ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಇಂತಹ ವೀರ್ಯವು ಅಂಡಾಣುವಿನತ್ತ ಲೀಲಾಜಾಲವಾಗಿ ಈಜಾಡುತ್ತದೆ. ಹೆಚ್ಚು ವೇಗ ಪಡೆಯುತ್ತದೆ. ಹೆಚ್ಚು ಪರಿಣಾಮಕಾರಿಯಾಗಿ ಅಂಡಾಣುವಿನೊಳಕ್ಕೆ ನುಸುಳುತ್ತದೆ ಎಂದು ಅಧ್ಯಯನ ತಿಳಿಸಿದೆ.

ಕೋಪನ್ ಹೆಗನ್ ವಿಶ್ವವಿದ್ಯಾಲಯದ ಸಂಶೋಧಕರು 340 ಪುರುಷರಲ್ಲಿ ಈ ಅಧ್ಯಯನ ಕೈಗೊಂಡಿದ್ದರು. ಅವರಲ್ಲಿ ಅರ್ಧಕ್ಕರ್ಧ ಮಂದಿಯ ಮೈಮೇಲೆ ಸೂರ್ಯನ ಕಿರಣಗಳು ತಲುಪದ ಕಾರಣ ವೀರ್ಯ ನಿಸ್ತೇಜವಾಗಿತ್ತು.

English summary
A study has found that vitamin D, which is produced by the body when exposed to the sun, boosts the quality of sperm in men. They become better at swimming towards the egg, have greater speed and are more penetrative.
Story first published: Monday, May 23, 2011, 15:38 [IST]

Get Notifications from Kannada Indiansutras