ಗಂಡು ಹೆಣ್ಣಿನ ಲೈಂಗಿಕ ಸಂಬಂಧ ಪರಸ್ಪರ ನಡೆಸುವ ಚರ್ಚೆಗಳ ಮೇಲೂ ಅವಲಂಬಿತವಾಗಿರುತ್ತವೆ. ಮಾತುಕತೆ ನಡೆಸುವುದರ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದು ಸಾರ್ವಕಾಲಿಕ ಸತ್ಯ. ಈ ಅಧ್ಯಯನ ಹೇಳಿದ್ದೇನೆಂದರೆ, ಧಾರ್ಮಿಕ ಆಚರಣೆಗಳಲ್ಲಿ ಹೆಚ್ಚು ನಂಬಿಕೆ ಇರುವವರು ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಮ್ಮ ಸಂಗಾತಿಯ ಜೊತೆಗೆ ಹಂಚಿಕೊಳ್ಳುವುದಿಲ್ಲ ಅಥವಾ ಹಿಂಜರಿಯುತ್ತಾರೆ.
ಪರಸ್ಪರ ಚರ್ಚೆಗಳು ನಡೆಯದಿದ್ದರಿಂದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದುಬಿಡುತ್ತವೆ ಮತ್ತು ಲೈಂಗಿಕ ಆಚರಣೆಗೆ ಸಾಕಷ್ಟು ಹಾನಿ ಉಂಟು ಮಾಡುತ್ತವೆ. ಅಮೆರಿಕದ ಕನ್ಸಾಸ್ ವಿಶ್ವವಿದ್ಯಾಲಯದ ಮನಶ್ಶಾಸ್ತ್ರಜ್ಞರಾದ ಡರೆಲ್ ರೇ ಮತ್ತು ಅಮಂಡಾ ಬ್ರೌನ್ ಎಂಬಿಬ್ಬರು ನಡೆಸಿದ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ.
ಈ ಅಧ್ಯಯನದಿಂದ ಮತ್ತಷ್ಟು ತಿಳಿದುಬಂದಿದ್ದೇನೆಂದರೆ, ಧಾರ್ಮಿಕ ಭಾವನೆಯುಳ್ಳವರು ಮತ್ತು ಇರದವರು ಇಬ್ಬರೂ ಲೈಂಗಿಕ ಆಚರಣೆಗಳಲ್ಲಿ ತೊಡಗುತ್ತಾರೆ. ಆದರೆ, ಹೆಚ್ಚು ಸಂತೃಪ್ತಿ ಹೊಂದುವವರು ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಇಲ್ಲದವರು. ಧಾರ್ಮಿಕ ಆಚರಣೆಯಲ್ಲಿ ಇರುವ ಹೆಚ್ಚು ನಂಬಿಕೆಯೇ ಅವರಲ್ಲಿ ಒಂದು ಬಗೆಯ ತಪ್ಪಿತಸ್ಥ ಭಾವನೆಯನ್ನು ತುಂಬುತ್ತದೆ. ನಂಬುತ್ತೀರಾ?