•  

ಒಸಾಮಾ 'ಸೆಕ್ಸ್ ಮಿಷಿನ್' ಆಗಿದ್ದನೆಂದು ಹೆಂಡತಿ ನಜ್ವಾ

Array
Osama Bin Laden
 
"ತನ್ನ ಪುರುಷ ಮಲಗುವ ಸಮಯದಲ್ಲಿ ಮಾತ್ರ ಅತ್ಯಂತ ನೆಮ್ಮದಿಯಿಂದಿರುತ್ತಿದ್ದೆ" ಎಂದು ಅಮೆರಿಕ ಸೇನಾಪಡೆಯಿಂದ ಹತನಾಗಿರುವ ಅಲ್ ಖೈದಾ ಅಧಿಪತಿ ಒಸಾಮಾ ಬಿನ್ ಲಾಡೆನ್ ನ ಮೊದಲ ಪತ್ನಿ ನಜ್ವಾ ನೆಮ್ಮದಿಯ ನಿಟ್ಟುಸಿರು ಬಿಡುತ್ತ ಹೇಳಿದ್ದಾಳೆ. ಏಕೆಂದರೆ, ವಿರೋಧಿಗಳ ವಿರುದ್ಧ ಜಿಹಾದಿ ಯುದ್ಧ ನಡೆಸಿದ ನಂತರ ಒಸಾಮಾ ಬೆಡ್ ರೂಮ್ ಹೊಕ್ಕನೆಂದರೆ ಹೊರಬರುತ್ತಿದ್ದುದು ಅನೇಕ ದಿನಗಳ ನಂತರವೆ!

ಶಯನಗೃಹ ಹೊಕ್ಕ ಮೇಲೆ ದಿನಗಟ್ಟಲೆ ಆತ ಏನು ಮಾಡುತ್ತಿದ್ದನೆಂದು ವಿವರಿಸಿ ಹೇಳಬೇಕಾಗಿಲ್ಲ. ತನ್ನ ಪತಿದೇವ ಅಕ್ಷರಶಃ 'ಸೆಕ್ಸ್ ಮಿಷಿನ್' ಆಗುತ್ತಿದ್ದ ಎಂದು ನಜ್ವಾ, ಅಮೆರಿಕದ ತನಿಖಾ ಪತ್ರಕರ್ತ ಜೀನ್ ಸಾಸ್ ಅವರಿಗೆ ನೀಡಿದ ಸಂದರ್ಶನದಲ್ಲಿ ತನ್ನ ಮತ್ತು ಒಸಾಮಾ ನಡುವಿನ ಲೈಂಗಿಕ ಸಂಬಂಧದ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾಳೆ. ನಜ್ವಾಳ ಜೀವನಚಿತ್ರ ಬಿಡಿಸುತ್ತಿರುವ ಜೀನ್, ಇನ್ನೂ ಹೊರಗೆ ಬಾರದಿರುವ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಅತ್ಯಂತ ನೆಚ್ಚಿನ ವೇಳೆ ಯಾವುದೆಂದು ನಜ್ವಾಗೆ ಕೇಳಲಾದ ಪ್ರಶ್ನೆಗೆ, ಮಲಗುವ ವೇಳೆ ಎಂದು ಆಕೆ ತುಂಟತನದಿಂದ ಹೇಳಿದ್ದಾಳೆ. ಮಲಗುವ ಸಮಯವೆಂದರೆ ಗೊರಕೆ ಹೊಡೆಯುವ ಸಮಯವಲ್ಲ. ಬದಲಾಗಿ, ಆ ಸಮಯದಲ್ಲಿ ಮಾತ್ರ ಒಸಾಮಾ ತನ್ನ ಹೆಂಡತಿಯ ಎಲ್ಲಾ ಬೇಕುಬೇಡಗಳ ಕಡೆಗೆ ಲಕ್ಷ್ಯ ವಹಿಸುತ್ತಿದ್ದ. ಅಫಘಾನಿಸ್ತಾನದಿಂದ ತಿರುಗಿ ಬಂದ ನಂತರ ಮಲಗುವ ಕೋಣೆ ಹೊಕ್ಕನೆಂದರೆ, ಮುಗಿಯಿತು ಎಂದು ನಜ್ವಾ ಸಂದರ್ಶನದಲ್ಲಿ ಹೇಳಿದ್ದಾಳೆ.

ರಿಯಾದ್ ನಲ್ಲಿ ನಪುಂಸಕ ಪುರುಷರಿಗಾಗಿ ಆಸ್ಪತ್ರೆಯೊಂದನ್ನು ತೆರೆದಾಗ ನಾಲ್ಕಕ್ಕೂ ಹೆಚ್ಚು ಪತ್ನಿಯರಿದ್ದ, 80 ವಯಸ್ಸು ದಾಟಿ ಪುರುಷರ ಸಾಲು ಹನುಮಂತನ ಬಾಲದಂತೆ ಬೆಳೆದಿತ್ತು ಎಂಬ ಅಂಶವನ್ನು ಸಾಸ್ ಆ ಪುಸ್ತಕದಲ್ಲಿ ತಿಳಿಸಿದ್ದಾರೆ. ಒಸಾಮಾಗೂ ನಾಲ್ಕು ಹೆಂಡತಿಯರಿದ್ದರು, ಆದರೆ, ನಾಲ್ವರನ್ನೂ ಸುಖದ ಲೋಲುಪತೆಯಲ್ಲಿ ತೇಲಾಡಿಸುವ ತಾಕತ್ತು ಆತನಿಗಿತ್ತು. ಯುದ್ಧಭೂಮಿಯಲ್ಲಿದ್ದಂತೆ ಬೆಡ್ ರೂಮಿನಲ್ಲೂ ಒಸಾಮಾ ದೈತ್ಯನಾಗಿದ್ದ.

ಪಾಕಿಸ್ತಾನದ ಅಬೊಟ್ಟಾಬಾದ್ ನಲ್ಲಿ ಒಸಾಮಾ ಹತನಾಗಿದ್ದಾಗ ಕೂಡ ಆತನೊಂದಿಗೆ ಹೆಂಡತಿಯರಿದ್ದರು. ಅವನಿದ್ದ ಮನೆಯಲ್ಲಿ ಹರ್ಬಲ್ ವಯಾಗ್ರಾಗಳು ದೊರೆತಿದ್ದವು. ಮಧುಮೇಹದಂಥ ರೋಗದಿಂದ ಆತ ಬಳಲುತ್ತಿದ್ದರೂ, 'ಪಿಂಕ್ ಲೇಡಿ' ಕಲ್ಲಂಗಡಿ ಮುಂತಾದ ನೈಸರ್ಗಿಕ ವಯಾಗ್ರಾಗಳನ್ನು ಬಳಸುತ್ತಿದ್ದ ಒಸಾಮಾ ತನ್ನ ಹೆಂಡತಿಯರನ್ನು ಲೈಂಗಿಕವಾಗಿ ತೃಪ್ತಿಪಡಿಸುವಲ್ಲಿ ಎಂದೂ ಸೋಲುತ್ತಿರಲಿಲ್ಲ.

English summary
Al-Qaeda chief Osama Bin Laden's first wife Najwa has revealed that her husband was like sex machine. Once he goes inside bed room he would come out after days. Jean Sass, US investigative journalist has noted these things in a biography of Najwa, Daily Mail has reported.
Story first published: Saturday, June 11, 2011, 13:58 [IST]

Get Notifications from Kannada Indiansutras