•  

ಲವ್ ಮೀಟರ್ : ಸುಖ ಪಡೆಯಲು ಮೀನ'ಮೇಷ'ವೇಕೆ?

Array
Sensual spots in Aries women
 
ಮೇಷ (Aries) ರಾಶಿಯ ಮಹಿಳೆಯರ ಮುಖ ಮತ್ತು ತಲೆಯ ಭಾಗದಲ್ಲಿ ಲೈಂಗಿಕತೆಯನ್ನು ಉದ್ದೀಪಿಸುವ ಸ್ಥಾನಗಳಿರುತ್ತವೆ. ದೇಹದ ಬೇರೆ ಯಾವುದೇ ಭಾಗಗಳಿಗಿಂತ ತಲೆ ಮತ್ತು ಮುಖದ ಭಾಗಗಳಲ್ಲಿ ಹೆಚ್ಚು ಪ್ರಣಯದಾಟವಾಡಿದರೆ ಸಂಗಾತಿ ಬೇಗನೆ ಸಂತಸದ ಉತ್ತುಂಗ ತಲುಪುತ್ತಾಳೆ.

ಲಾಸ್ಯವಾಡುವ ರೇಷ್ಮೆಯ ಕೇಶರಾಶಿಯೊಡನೆ ಬೆರಳಿನ ತುದಿಯಿಂದ ನೇವರಿಸುವುದು ಈ ಮಹಿಳೆಯರಿಗೆ ಅಚ್ಚುಮೆಚ್ಚು. ಜಲಪಾತದ ರಾಶಿಯಂತೆ ಜೋತುಬಿದ್ದ ಕೂದಲಿನಲ್ಲಿ ಬೆರಳಾಡಿಸುವುದು ಸಂಗಾತಿಯನ್ನು ಲೈಂಗಿಕ ಸುಖ ಪಡೆಯಲು ಅಣಿಯಾಗಿಸುತ್ತದೆ. ಕೆಲವರು ಬಾಚಿಸಿಕೊಳ್ಳುವುದನ್ನು ಕೂಡ ಇಷ್ಟಪಡುತ್ತಾರೆ.

ನವಿರಾದ ತುಟಿಗಳ ಮೇಲೆ ಬೆರಳಾಡಿಸುವುದು, ಕಣ್ಣು ಕಿವಿ ನಡುವಿನ ಭಾಗದ ಮೇಲೆ ಮೆತ್ತಗೆ ಮಸಾಜ್ ಮಾಡುವುದು, ಕಣ್ಣುಗಳನ್ನು ಹೊಗಳುತ್ತಲೇ ಚುಂಬಿಸುವುದು, ಕಿವಿಗಳಲ್ಲಿ ತಂಗಾಳಿ ಬೀಸಿದಂತೆ ಊದುವುದು ಕೂಡ ಮೇಷ ರಾಶಿಯ ಹೆಂಗಳೆಯರನ್ನು ಲೈಂಗಿಕ ಕ್ರಿಯೆಗೆ ಅಣಿಗೊಳಿಸುವ ತಂತ್ರ.

ಇನ್ನು ಅವರಿಗಿಷ್ಟವಾದ ಭಾಗದಲ್ಲಿ ಮೈಮೇಲೆ ಚಳಿಗುಳ್ಳೆಗಳಾಗುವಂತೆ ಬೆರಳಾಡಿಸುವುದು, ಇಷ್ಟಪಟ್ಟ ಜಾಗದಲ್ಲೆಲ್ಲ ಮುತ್ತಿನ ಮಳೆಗರೆಯುವುದು ಇದ್ದದ್ದೆ. ಚುಮುಚುಮು ಚಳಿಯಲ್ಲಿ ಅಹಂಕಾರವೆಂಬ ಬಟ್ಟೆಗಳನ್ನು ಕಳಚಿದ ಮೈಮೇಲೆ ಹಿತವಾದ ಬಿಸಿನೀರು ಬಿದ್ದ ಶುಭಘಳಿಗೆಯಲ್ಲಿ ಪ್ರಣಯದಾಟ ನಡೆಯಲಿ.

ಮುಂದಿನ ರಾಶಿ : ಸುತ್ತಿ ಬಂದು ಮುತ್ತು ಕೊಟ್ಟರೆ, ಲೋಕವನ್ನೇ ಗೆದ್ದಂತೆ

English summary
To ensure that you and your partner have a very good and fulfilling lovemaking session, recognize the sensual spots in your woman, so that she is very excited. Woman with Aries zodiac sign has sensuous spots in face and head part.
Story first published: Monday, August 29, 2011, 17:17 [IST]

Get Notifications from Kannada Indiansutras