•  

ಮೇಷದಿಂದ ಮೀನದವರಿಗೆ, ಇದು ಲವ್ ಮೀಟರ್!

Array
Sensual spots in women
 
ಬದುಕಿನ ಮುಂದಿನ ಘಳಿಗೆಗಳನ್ನು ಸಂಗಾತಿಯೊಡನೆ ಸುಮಧುರವಾಗಿ ಕಳೆಯಬೇಕೆಂದು ನಂಬಿ ಸಪ್ತಪದಿ ತುಳಿದುಬಂದ ಹೆಂಡತಿಯಾಗಲಿ, ಲಿವ್-ಇನ್ ರಿಲೇಶನ್ ಶಿಪ್ ಗೆಳತಿಯಾಗಲಿ ಲೈಂಗಿಕ ಜೀವನ ಅದ್ಭುತವಾಗಿರಲಿ ಎಂದು ಬಯಸುತ್ತಾಳೆ. ಕಷ್ಟವಿರಲಿ ಸುಖವಿರಲಿ ಹೆಜ್ಜೆಯ ಜೊತೆ ಹೆಜ್ಜೆ ಹಾಕುವೆನೆಂದು ಬಂದ ಬಾಳಗೆಳತಿಯನ್ನು ತೃಪ್ತಿಯಾಗುವಂತೆ ಸುಖನೀಡುವ ಕರ್ತವ್ಯ ಗಂಡನದ್ದು. ಸುಖಸಂಸಾರದ ಸೂತ್ರಗಳಲ್ಲಿ ಇದು ಕೂಡ ಒಂದು.

ಒಬ್ಬೊಬ್ಬರ ವ್ಯಕ್ತಿತ್ವ, ಆಸೆ, ಆಕಾಂಕ್ಷೆ, ಸುಖಪಡುವ ರೀತಿ ಒಂದೊಂದು ರೀತಿ ಇರುತ್ತದೆ. ಅವರು ಹುಟ್ಟಿದ ದಿನಾಂಕ ಮಾತ್ರವಲ್ಲ ಅವರ ಜನ್ಮರಾಶಿಗೆ ತಕ್ಕಂತೆ ಸುಖದ ಬಿಂದುಗಳು ದೇಹದ ಬೇರೆ ಬೇರೆ ಭಾಗಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ಅವನ್ನು ವ್ಯವಧಾನದಿಂದ ತಿಳಿದುಕೊಂಡು ಸಂಗಾತಿಯ ಆಕಾಂಕ್ಷೆಗಳಿಗೆ ತಕ್ಕಂತೆ ಸರಸದ ಆಟವಾಡಿ ಲೈಂಗಿಕ ತೃಪ್ತಿ ನೀಡಿದರೆ ಒಳ್ಳೆಯ ಗಂಡನೆನಿಸಿಕೊಳ್ಳುತ್ತೀರಿ.

ರತಿಕ್ರೀಡೆಯಾಡುವ ಪಟ್ಟುಗಳನ್ನು ಅಲ್ಲಲ್ಲಿ ಓದಿ, ತಿಳಿದುಕೊಂಡು ಕರತಲಾಮಲಕ ಮಾಡಿಕೊಳ್ಳುವುದು ಒಂದು ಕಲೆ. ಕಾಂಡೋಮ್ ಅಥವಾ ಕಾಮಸೂತ್ರದ ಪುಸ್ತಕ, ಸಿಡಿಗಳನ್ನು ಕೇಳಿ ಇಸಿದುಕೊಳ್ಳುವಾಗ ನಡುಗುವ ನಾವು ಸುರತಕ್ರೀಡೆಯ ವಿಷಯ ಇನ್ನೂ ಮುಕ್ತವಾಗಿ ಹಂಚಿಕೊಳ್ಳಬೇಕಿದೆ. ಇದನ್ನು ತಿಳಿಸುವ ಉದ್ದೇಶದಿಂದಲೇ ಆಯಾ ರಾಶಿಗೆ ತಕ್ಕಂತೆ ಎಲ್ಲೆಲ್ಲಿ ಸುಖಿಸುವ ಬಿಂದುಗಳಿರುತ್ತವೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಮುಂದಿನ ಭಾಗ ಓದುವ ಮುನ್ನ ನಿಮ್ಮ ಹೆಂಡತಿ ಅಥವಾ ಸಂಗಾತಿಯ ಜನ್ಮರಾಶಿ ಯಾವುದೆಂದು ತಿಳಿದುಕೊಳ್ಳಿ. ರಾಶಿಗೆ ತಕ್ಕಂತೆ ಕಾಮನೆ ಕೆರಳಿಸುವ ಸ್ಪಾಟ್ ಗಳು ಮತ್ತು ಅವು ನೀಡುವ ಸುಖಗಳ ಬಗ್ಗೆ ಒಂದೊಂದೇ ಪುಟಗಳು ತೆರೆದುಕೊಳ್ಳಲಿವೆ. ಟ್ಯೂಬ್ ಲೈಟ್ ಆರಿದ ನಂತರದ ಸುಂದರ ರಾತ್ರಿಗಳು ನಿಮಗೆ ದಕ್ಕಲಿ, ಅದ್ಭುತ ಮಿಲನ ಮಹೋತ್ಸವದ ಸಂಭ್ರಮ ನಿಮ್ಮದಾಗಲಿ.

ಮೇಷ | ವೃಷಭ | ಮಿಥುನ | ಕರ್ಕಾಟಕ | ಸಿಂಹ | ಕನ್ಯಾ | ತುಲಾ | ವೃಶ್ಚಿಕ | ಧನಸ್ಸು | ಮಕರ | ಕುಂಭ | ಮೀನ

ಮುಂದಿನ ಓದು : ಮೇಷ ರಾಶಿಯ ಮಹಿಳೆಗೆ ಸುಖ ನೀಡುವ ಕೇಶರಾಶಿ...

English summary
To ensure that you and your partner have a very good and fulfilling lovemaking session, recognize the sensual spots in your woman, so that she is very excited. Sensual spots in your woman depends on the zodiac sign.
Story first published: Sunday, August 28, 2011, 17:15 [IST]

Get Notifications from Kannada Indiansutras