ಕುಂಭ (Aquarius) ರಾಶಿ ಸಂಗಾತಿಯ ಕಾಮನೆಗಳ ಬಣ್ಣಗಳನ್ನು ಅಳೆದುತೂಗುವುದು ಸ್ವಲ್ಪ ಕಷ್ಟ. ಆರಂಭದಲ್ಲಿ ಪ್ರೇಮಸಲ್ಲಾಪದ ಭಾವನೆಗಳನ್ನು ಮುಕ್ತವಾಗಿ ತೋರಲು ಸ್ವಲ್ಪ ಹಿಂಜರಿಯುತ್ತಾಳೆ. ಆದರೆ, ಸಂಬಂಧ ಗಟ್ಟಿಯಾಗುತ್ತಾ ಸಾಗಿದಂತೆ ಸುಖದ ಸ್ವಪ್ನಗಾನ ಹಾಡುತ್ತ, ಗಂಡನನ್ನು ಕಾಮನೆಗಳ ಮೋಡದಲ್ಲಿ ತೇಲಾಡಿಸಿಬಿಡುತ್ತಾಳೆ.
ಆದರೆ, ಆಕೆಯನ್ನು ಗಂಡ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಒಂದು ಹೆಣ್ಣಿಗೆ ಸಿಗಬೇಕಾದ ಗೌರವ ಮರ್ಯಾದೆಯಾಗಿ ಆಕೆಗೆ ಕೊಡಬೇಕು. ಆಕೆಯಲ್ಲಿ ನಿಮ್ಮ ಬಗ್ಗೆ ಗೌರವ ಮೊಳೆತುಬಿಟ್ಟರೆ ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಮ್ಮಷ್ಟು ಅದೃಷ್ಟವಂತ ಗಂಡ ಇನ್ನೊಬ್ಬ ಇರಲಿಕ್ಕಿಲ್ಲ.
ಮೈತುಂಬ ಸೀರೆಯುಟ್ಟಾಗಲೂ ರತಿಕ್ರೀಡೆಗೆ ಗಂಡನನ್ನು ಚುಂಬಕದಂತೆ ಸೆಳೆಯಬಲ್ಲ ಆಕರ್ಷಣೆ ಅವಳಲ್ಲಿ ಇರುತ್ತದೆ. ತನ್ನ ಅಂದವನ್ನೆಲ್ಲ ಸುಂದರ ಕಣ್ಣುಗಳಲ್ಲೇ ಆಕೆ ತುಂಬಿಕೊಂಡಿರುತ್ತಾಳೆ. ಸುಂದರ ನಯನಗಳ ಒಡತಿಯನ್ನು ಪಲ್ಲಂಗದ ಮೇಲೆ ರಮಿಸುವ ಮುನ್ನ ಹಾಡಿ ಹೊಗಳಿಬಿಡಿ. ಒಂದು ಚುಂಬನ ಉಲ್ಲಾಸದ ಹೂಮಳೆಯನ್ನು ಸುರಿಸಿಬಿಡುತ್ತದೆ.
ಕಣ್ಣುಗಳ ಹಾಗೆ, ತನ್ನ ಕಾಲುಗಳ ಮೇಲೆ ಆಕೆಗೆ ಬಲು ಅಭಿಮಾನ. ಸೀರೆಯನ್ನು ಅಲ್ಪ ಮೇಲೆತ್ತಿ ಕಾಲುಗಳನ್ನು ಮೃದುವಾಗಿ ಒತ್ತಿರಿ, ಮೆಲ್ಲಗೆ ಬೆರಳ ತುದಿಯಿಂದ ಗೆರೆ ಎಳೆಯುವ ಆಟವಾಡುತ್ತ ತುಟಿಗಳಿಂದ ಚುಂಬಿಸಿ. ಮುಂದೆ ಭೋರ್ಗರೆಯುವ ಪ್ರಣಯದಾಟಕ್ಕೆ ಸಿದ್ಧವಾಗಿರಿ. ಹ್ಯಾಪಿ ಮಿಲನ ಮಹೋತ್ಸವ.
ಮೇಷ | ವೃಷಭ | ಮಿಥುನ | ಕರ್ಕಾಟಕ | ಸಿಂಹ | ಕನ್ಯಾ | ತುಲಾ | ವೃಶ್ಚಿಕ | ಧನಸ್ಸು | ಮಕರ | ಕುಂಭ | ಮೀನ