ಕತ್ತಲು ಮುಸುಕು ಹೊದ್ದುವ ಸಮಯದಲ್ಲಿ, ಕ್ಯಾಂಡಲ್ ಲೈಟ್ ಬೆಳಕಿನಲ್ಲಿ, ಸುವಾಸನೆ ಬೀರುವ ಕೋಣೆಯಲ್ಲಿ, ಮೆಲ್ಲಮೆಲ್ಲಗೆ ಸೊಂಟ ಬಳುಕಿಸುತ ಸೀರೆಯಲಿ ಬರುವ ನೀರೆಯಲ್ಲಿ, ಗಂಡನನ್ನು ಕಾಮಸಾಗರದಲ್ಲಿ ಮೀಯಿಸಿ, ಪ್ರೇಮಸಾಗರದಲ್ಲಿ ತೋಯಿಸಿಬಿಡುವ ಕಲೆಗಾರಿಕೆ ಮೀನ (Pisces) ರಾಶಿಯ ಹೆಣ್ಣಿಗೆ ಕರತಲಾಮಲಕ.
ಜಾರಬಂಡೆಯಾಡುವ ಸೆರಗಿನ ಹಿಂದೆ ಅಡಗಿಕೊಂಡಿರುವ, ಪುಟ್ಟ ಬೆಟ್ಟದಂತಿರುವ ಸ್ತನಗಳೇ ಗಂಡನನ್ನು ಕಾಮನೆಗೆ ಕೆರಳಿಸಲು ಸಾಕು. ಆಕೆಯ ಮನವನ್ನು ಅರಳಿಸಲು ಇದೇ ಅಸ್ತ್ರವನ್ನು ಸಂಗಾತಿ ಬಳಸಬಹುದು. ಸುಖವನ್ನು ಕೊಡುವುದು ಮಾತ್ರವಲ್ಲ, ಅದನ್ನು ಹೇಗೆ ಪಡೆಯಬೇಕೆಂಬ ಚಾಕಚಕ್ಯತೆ ಕೂಡ ಆಕೆಯಲ್ಲಿರುತ್ತದೆ.
ಹಾಗಾಗಿ, ಉಳಿದ ಸಮಯದಲ್ಲಿ ಡಾಮಿನೇಟ್ ಮಾಡುವ ಗಂಡನೇ, ರಾತ್ರಿ ಸರಸದ ಸಮಯದಲ್ಲಿ ಆಕೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡರೆ ಆಯಿತು. ಸೆರಗು ಜಾರಿದಾಗ ಕಾಣುವ ಕಣಿವೆಯನ್ನು ಮುದ್ದಿಸುವುದು, ಹಿತವಾಗಿ ಅಮುಕುವುದು, ನೋವಾಗದಂತೆ ಕಚ್ಚುವುದು, ಇಷ್ಟಪಟ್ಟರೆ ಎದೆಯ ಅನುರಾಗ ಹೀರುವುದು... ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು.
ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದ್ದಾಗ ಹೆಂಡತಿಯನ್ನು ನಿರಾಸೆಗೊಳಿಸಬೇಡಿ. ಯಾಕೆಂದರೆ, ಮುಂದೆ ಆಗುವ ನಷ್ಟಕ್ಕೆ ನೀವೇ ಜವಾಬ್ದಾರರು. ಜಡ್ಡು ಬಿದ್ದಂತಿರುವ ಬೊಡ್ಡೆಯನ್ನು ಆಕೆಯೆಂದೂ ಪ್ರೇಮಿಸಲಾರಳು. ಚಿಮ್ಮುತಿದೆ ಹೊರಹೊಮ್ಮುತಿಗೆ ಪ್ರೇಮದ ಕಾರಂಜಿ ಅಂತ ಹಾಡಿಕೊಳ್ಳುತ್ತ ಆನಂದ ಸಾಗರದಲ್ಲಿ ತೇಲಾಡಿರಿ.
ಮೇಷ | ವೃಷಭ | ಮಿಥುನ | ಕರ್ಕಾಟಕ | ಸಿಂಹ | ಕನ್ಯಾ | ತುಲಾ | ವೃಶ್ಚಿಕ | ಧನಸ್ಸು | ಮಕರ | ಕುಂಭ | ಮೀನ