ಏಕೆಂದರೆ, ಕ್ಯಾಪ್ರಿಕಾರ್ನ್ (Capricorn) ವುಮನ್ ಮಹತ್ವಾಕಾಂಕ್ಷಿ, ಮಹಾ ಸ್ವಾಭಿಮಾನಿ, ಆದರ್ಶವನ್ನು ಪಾಲಿಸುವ ಮಹಿಳೆ ಎಂದು ನಂಬಿರುವವಳು. ಗಂಡನೂ ಹಾಗೇ ಇರಬೇಕೆಂದು ಬಯಸುವವಳು. ದೇಹಸುಖಕ್ಕಾಗಿ ಮನಸ್ಸನ್ನು ಬಲಿಕೊಡುವ ಜಾಯಮಾನದವಳೇ ಅಲ್ಲ. ಆದರೆ ಮನಸು ಗೆದ್ದರೆ ಮಾತ್ರ ದೈಹಿಕವಾಗಿ ಗಂಡನನ್ನು ಸಂತೃಪ್ತಿಪಡಿಸುವಲ್ಲಿ ಮೋಸ ಮಾಡುವುದಿಲ್ಲ. ಇದು ಕೂಡ ಹಿತಮಿತವೆ.
ಅಸಹ್ಯಕರ ಕಾಮಚೇಷ್ಟೆಗಳಿಗೆ ಇವಳೆಂದೂ ಸೊಪ್ಪುಹಾಕುವುದಿಲ್ಲ. ಅವಳಿಷ್ಟಪಟ್ಟಂತೆ, ಅವಳಿಷ್ಟದ ದಿರಿಸಿನಲ್ಲಿ ಸುಖಿಸಲು ರೆಡಿಯಾದಿರೋ ಸರಿ, ಇಲ್ಲ ಗೆಟ್ ಲಾಸ್ಟ್. ಆದರೆ, ಒಂದು ಮಾತು, ಅವಳ ಮನಸನ್ನು ನೀವು ಗೆದ್ದಿದ್ದೇ ಆದಲ್ಲಿ ಅವಲಕ್ಕಿ ಒಗ್ಗರಣೆಯ ವಾಸನೆಯನ್ನು ಅರಸಿ ಬಂದ ನಾಸಿಕದಂತೆ ಆಕೆ ತಾನಾಗಿಯೇ ನಿಮಗೆ ಒಲಿಯುತ್ತಾಳೆ.
ಇಷ್ಟೆಲ್ಲ ಆದಾಗ್ಯೂ ಅವಳನ್ನು ಕಾಮಕೇಳಿಗೆ ಸೆಳೆಯಲು ಒಂದು ಮಾರ್ಗವಿದೆ. ಅದು ಆಕೆಯ ಮೃದುವಾದ ಪಾದಗಳು. ಜತನದಿಂದ ಕಾಪಾಡಿಕೊಂಡು ಸುಂದರವಾಗಿಟ್ಟುಕೊಂಡ ಕಮಲದಂಥ ಪಾದಗಳಲ್ಲಿ ಆಕೆಯನ್ನು ಕಾಮನೆಗೆ ಸೆಳೆಯುವ ಬಿಂದುವಿದೆ. ಪಾದಗಳನ್ನು ಮೃದುವಾಗಿ ಒತ್ತುವುದು, ರಸ ಚಿಮ್ಮುವಂತೆ ಚುಂಬಿಸುವುದು, ನವಿಲಗರಿ ಸರಿದಾಡಿದಂತೆ ಬೆರಳಾಡಿಸುವುದು ಆಕೆಯನ್ನು ಸರಸಕೆ ಸರಸರನೆ ಬರಸೆಳೆದಂತೆ. ಆಕೆಯ ಚರಣದ ಮೇಲೆ ವಶೀಕರಣ ಬೀರಿದರೆ ಆಕೆ ನಿಮಗೆ ಶರಣಾಗಿರುತ್ತಾಳೆ. ಮುಂದೆ ಏನು ಮಾಡಬೇಕೆಂದು ನೀವೇ ನಿರ್ಧರಿಸಿ.
ಮೇಷ | ವೃಷಭ | ಮಿಥುನ | ಕರ್ಕಾಟಕ | ಸಿಂಹ | ಕನ್ಯಾ | ತುಲಾ | ವೃಶ್ಚಿಕ | ಧನಸ್ಸು | ಮಕರ | ಕುಂಭ | ಮೀನ