ಮೈಬಗ್ಗಿಸಿ ಕೆಲಸ ಮಾಡುವುದರಲ್ಲಿಯೂ ತುಲಾ ರಾಶಿ ಸ್ತ್ರೀಯನ್ನು ಹಿಂದೆ ಹಾಕಲು ಯಾರಿಗೂ ಸಾಧ್ಯವಿಲ್ಲ. ತುಲಾ ರಾಶಿ ಸಂಗಾತಿಯನ್ನು ಹಾಸಿಗೆಯಲ್ಲಿ ರಮಿಸುವ ತಂತ್ರ ಆಕೆಯ ಸೂಪರ್ ಸೊಂಟದಲ್ಲಿದೆ. ಆದರೆ, ಆಕೆಯನ್ನು ಅನುರಾಗಿಸಲು ನಿರ್ಲಕ್ಷ್ಯವಹಿಸಿದರೆ ಮಾತ್ರ ಭಾರೀ ಡೇಂಜರು.
ಬೆನ್ನಿನ ಕೆಳತುದಿಯ ಭಾಗ ಮತ್ತು ಪೃಷ್ಠದ ತುಸು ಮೇಲಿನ ಭಾಗದಲ್ಲಿ ಆಕೆಯ ಕಾಮನೆಯನ್ನು ಕೆರಳಿಸುವ ಕೀಲಿಕೈಯಿದೆ. ಮೈಬಗ್ಗಿಸಿದ ದುಡಿದ ಸಂಗಾತಿಯ ಸೊಂಟದ ಮೇಲೆ ಅಪ್ಯಾಯಮಾನವಾಗಿ ಕೈಯಾಡಿಸಿದರೂ ಸಾಕು ಒಲವಿನ ಸುರಿಮಳೆಯನ್ನೇ ನಿಮ್ಮ ಮೇಲೆ ಸುರಿಸಿಬಿಡುತ್ತಾಳೆ.
ಪೃಷ್ಠದ ಸಮೇತ ಸೊಂಟದ ಮೇಲೆ ಕೈಯಾಡಿಸುವುದು, ನಿರೀಕ್ಷಿಸಿಯೇ ಇರದ ಸಂದರ್ಭದಲ್ಲಿ ಬೆನ್ನಿನ ಕೆಳಭಾಗದಲ್ಲಿ ಚುಂಬಿಸುವುದು, ನಿಮ್ಮ ಕುರುಚಲು ಗಡ್ಡದಿಂದ ನವಿರಾಗಿ ಕಚಗುಳಿಯಿಡುವುದು ಆಕೆಯನ್ನು ಸುಖದ ಹಂಸತೂಲಿಕಾತಲ್ಪದಲ್ಲಿ ಮಲಗಿಸಿ ತೇಲಾಡಿಸಿಬಿಡುತ್ತದೆ.
ಇಷ್ಟು ಮಾತ್ರವಲ್ಲದೆ, ಆಕೆ ಆಯಾಸಗೊಂಡಾಗ, ಆಕೆಗೆ ಬೇಕೆನಿಸಿದಾಗ ಯಾವುದೇ ಕಾಮಾಂಕಾಕ್ಷೆಯಿಲ್ಲದೆ ಪೃಷ್ಠದ ಮೇಲ್ಭಾಗದಲ್ಲಿ ನಯವಾಗಿ ಕೈಯಾಡಿಸುತ್ತ, ನೋವಡಗಿಸುವ ಬಾಮ್ ಹಚ್ಚಿ ಮಸಾಜ್ ಮಾಡುತ್ತ, ಆಕೆಗೆ ನೆಮ್ಮದಿ ನೀಡುವುದನ್ನು ಮರೆಯಬೇಡಿ. ಏಕೆಂದರೆ, ನೀವು ನೀಡಿದ ಪ್ರೀತಿಯ ದುಪ್ಪಟ್ಟು ಆಕೆಯಿಂದ ಸಿಗುತ್ತದೆ.
ಮೇಷ | ವೃಷಭ | ಮಿಥುನ | ಕರ್ಕಾಟಕ | ಸಿಂಹ | ಕನ್ಯಾ | ತುಲಾ | ವೃಶ್ಚಿಕ | ಧನಸ್ಸು | ಮಕರ | ಕುಂಭ | ಮೀನ