•  

ಧನಸ್ಸು ಸಂಗಾತಿಯಲ್ಲಿ ಕಾಮಾಗ್ನಿ ಧಗಧಗನೆ ಉರಿಯಲು

Array
Sensual spots in Sagittarius woman
 
ಧನಸ್ಸು ರಾಶಿಯ ಮಹಿಳೆ ಬುದ್ಧಿವಂತೆ, ಸ್ವಾವಲಂಬಿ, ಕ್ರೀಡಾಸ್ಫೂರ್ತಿಯುಳ್ಳವಳು ಮತ್ತು ಹೊಗಳಿಕೆಗೆ ಶಿರಬಾಗಿಸುವವಳು. ಮಾತಿನ ಮೋಡಿಯಲ್ಲೇ ಮರಳು ಮಾಡಲು ಬಲ್ಲ ಧನು ರಾಶಿ (Sagittarius) ಸಂಗಾತಿ, ಗಂಡನನ್ನು ಬುಗುರಿಯಂತೆ ಆಡಿಸಲೂ ಬಲ್ಲಳು. ಆದರೆ, ಪ್ರೇಮದಾಟದ ಸಮಯ ಬಂದಾಗ ತಾನೇ ಸ್ವತಃ ಗಂಡನಿಂದ ಆಟವಾಡಿಸಿಕೊಳ್ಳಲು ಬಯಸುತ್ತಾಳೆ.

ನಿಮ್ಮ ಸಂಗಾತಿಯನ್ನು ನೀವು ನಿಜಕ್ಕೂ ಪ್ರೀತಿಸುವಿರಾದರೆ ಚೆನ್ನಾಗಿ ಹೊಗಳುವುದನ್ನು ಕರಗತ ಮಾಡಿಕೊಳ್ಳಿ. ಆಕೆಯ ಅಂದ ಚೆಂದ, ಮೈಮಾಟ, ವೈಯಾರ, ಉಬ್ಬುತಗ್ಗುಗಳ ಪ್ರಶಂಸೆ ಸಂಗಾತಿಯನ್ನು ಮರಳು ಮಾಡಿ ಮಾಯಾಜಾಲದಲ್ಲಿ ಬೀಳಿಸಿಬಿಡುತ್ತದೆ. ಹಾಗೆಯೆ, ಆಕೆ ಎಂಥದೇ ಕಾಮದಾಟಕ್ಕೂ ಯಾವುದೇ ಕ್ಷಣದಲ್ಲೂ ಮುಕ್ತಳಾಗಿರುತ್ತಾಳೆ. ಸೋ, ಅವಳ ಮೇಲೆ ಕಾಮಬಾಣ ಎಸೆಯಲು ಗಂಡನೇ ಸಿದ್ಧನಾಗಬೇಕು.

ಧನಸ್ಸು ಮಹಿಳೆಯಲ್ಲಿ ಕಾಮಾಗ್ನಿ ಧಗಧಗನೆ ಉರಿಯುವಂತೆ ಮಾಡುವ ಅಂಗವೆಂದರೆ ಆಕೆಯ ಬಾಳೆದಿಂಡಿನಂಥ ಅಂದವಾದ ತೊಡೆಗಳು. ಜಾರುಬಂಡೆಯಂತಿರುವ ಕಾಲ್ಗಳ ತುದಿಯಿಂದ ಚುಂಬಿಸುತ್ತ ಸೊಂಟಕ್ಕೆ ಬರುವ ಹೊತ್ತಿಗೆ ನಿಮ್ಮ ಆಟಕ್ಕೆ ಆಕೆ ಅಂಗಳ ಬಿಟ್ಟುಕೊಡುತ್ತಾಳೆ. ತೊಡೆಗಳು ಮತ್ತು ಪೃಷ್ಠದ ಮೇಲೆ ಮಸಾಜ್ ಮಾಡುವುದರಿಂದ ಆಕೆಯಲ್ಲಿ ಕಾಮದ ಕಾರಂಜಿಯನ್ನು ಉಕ್ಕಿಸುತ್ತದೆ.

ಭಾಮೆಯೊಂದಿಗೆ ಪ್ರೇಮ ಸಲ್ಲಾಪವನ್ನು ಮನೆಯಲ್ಲಿಯೇ ಮಾಡಬೇಕೆಂದಿಲ್ಲ. ಪ್ರಕೃತಿಯನ್ನು ಇಷ್ಟಪಡುವ ಸಂಗಾತಿಯನ್ನು ಪ್ರಕೃತಿ ಮಡಿಲಿಗೆ ಕರೆದುಕೊಂಡು ಹೋಗಿ ಭರ್ಜರಿಯಾಗಿ ಮಿಲನ ಮಹೋತ್ಸವ ಆಚರಿಸಿಕೊಳ್ಳಿ. ದಟ್ಟ ಕಾನನದ ನಡುವೆ ಮಂಜಿನ ಹನಿಗಳು ಮೈಮುತ್ತುವ ಸಮಯದಲ್ಲಿ ಅನುರಾಗದ ಅಲೆಯ ಮೇಲೆ ತೇಲಾಡಿರಿ, ನೀರವ ಹಗಲು ರಾತ್ರಿಗಳಲ್ಲಿ ಬಿಟ್ಟುಬಿಡದೆ ಒಂದಾಗಿರಿ.

ಮೇಷ | ವೃಷಭ | ಮಿಥುನ | ಕರ್ಕಾಟಕ | ಸಿಂಹ | ಕನ್ಯಾ | ತುಲಾ | ವೃಶ್ಚಿಕ | ಧನಸ್ಸು | ಮಕರ | ಕುಂಭ | ಮೀನ

English summary
To ensure that you and your partner have a very good and fulfilling lovemaking session, recognize the sensual spots in your woman, so that she is very excited. Prolong the foreplay, stroke her thighs, run your fingers up and down the inner thighs, gently bite or pinch the inner thigh area to excite your woman.
Story first published: Sunday, September 18, 2011, 16:31 [IST]

Get Notifications from Kannada Indiansutras