•  

ಸ್ಲಟ್ ವಾಕ್ ಭಾರತೀಯ ಸಂಸ್ಕೃತಿಯ ಭಾಗವೆ?

Array
"ಅಲ್ಲೀ ಹೆಸರಲ್ಲೇನಿದೆ? ಸ್ಲಟ್ ವಾಕ್ ಅಂತ ಕರೆದ್ರೆ ಏನು ತಪ್ಪು? ನಾವೇನು ಪಾಕಿಸ್ತಾನ ಕೆಟ್ಟೋದ್ವಾ? ನಾವು ಯಾವ ಬೆದರಿಕೆಗೂ ಬಗ್ಗೋದಿಲ್ಲ, ಬೆಂಗಳೂರಿನಲ್ಲಿ ಸ್ಲಟ್ ವಾಕ್ ನಡಿಸೇ ನಡಿಸ್ತೀವಿ. ಇನ್ನೂ ದೊಡ್ಡ ಪ್ರಮಾಣದಲ್ಲಿ ನಡಿಸ್ತೀವಿ. ಕಾನೂನಿನ ಚೌಕಟ್ಟಿನಲ್ಲಿ, ಕಾನೂನು ತಜ್ಞರ ಸಲಹೆಯಂತೆ ನಡಿಸ್ತೀವಿ" ಎಂದು ಬೆಂಗಳೂರಿನ ಸ್ಲಟ್ ವಾಕಿಗಳು ಹೂಂಕರಿಸುತ್ತಿದ್ದಾರೆ.ಮಹಿಳೆಯರ ಮೇಲೆ ನಡೆಯುತ್ತಿರುವ ದೈಹಿಕ, ಲೈಂಗಿಕ, ಮಾನಸಿಕ ದಬ್ಬಾಳಿಕೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಡಿಸೆಂಬರ್ 4ರಂದು ಟೌನ್ ಹಾಲ್ ಎದುರಿಗೆ ಸ್ಲಟ್ ವಾಕ್ ಆಯೋಜಿಸಲಾಗಿತ್ತು. ಆದರೆ, ಕೆಲ ಸಂಘಟನೆಗಳಿಂದ ಬೆದರಿಕೆ ಬಂದ ಕಾರಣ ಪೊಲೀಸರು ಸ್ಲಟ್ ವಾಕ್ ನಡೆಸಲು ಅನುಮತಿ ನೀಡಿರಲಿಲ್ಲ.'ಅತ್ಯಾಚಾರ ಮಾಡುವವರು ಪುರುಷರು, ಧರಿಸುವ ಬಟ್ಟೆಯಲ್ಲ' ಎಂಬ ಘೋಷವಾಕ್ಯದೊಂದಿಗೆ ಸ್ಲಟ್ ವಾಕ್ ಬೆಂಬಲಿಸುವ ಜನರೆಲ್ಲ ಮತ್ತಷ್ಟು ರೊಚ್ಚಿಗೆದ್ದಿದ್ದು, ಖಂಡಿತ ಸ್ಲಟ್ ವಾಕ್ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಾವೇನು ಕಾನೂನು ವಿರೋಧಿ ಚಳವಳಿ ಮಾಡುತ್ತಿಲ್ಲ. ಸದುದ್ದೇಶ ಇಟ್ಟುಕೊಂಡು ಮಹಿಳೆಯರ ಪರ ಈ ಚಳವಳಿ ಮಾಡುತ್ತಿದ್ದೇವೆ. ಸ್ಲಟ್ ವಾಕ್ ಎಂಬುದು ಭಾರತೀಯ ಸಂಸ್ಕೃತಿಯ ಭಾಗವೆ ಎಂದು ಆಯೋಜಕರಲ್ಲೊಬ್ಬರಾದ ದಿಲ್ಲನ್ ಚಂದ್ರಮೌಳಿ ಹೇಳಿಕೆ ನೀಡಿದ್ದಾರೆ.ಸ್ಲಟ್ ವಾಕ್ ಹೆಸರಲ್ಲಿ ಅಸಹ್ಯಕರವಾಗಿ ಡ್ರೆಸ್ ಧರಿಸುವುದು, ರಸ್ತೆಯಲ್ಲೆಲ್ಲ ಅಸಭ್ಯವಾಗಿ ವರ್ತಿಸುವುದು, ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡುವುದು 'ಭಾರತೀಯ ಸಂಸ್ಕೃತಿ'ನಾ? ಎಂದು ಸ್ಲಟ್ ವಾಕ್ ವಿರೋಧಿಸಿದ ಸಂಘಟನೆಗಳ ವಾದ. ಪಾಶ್ಚಾತ್ಯ ಸಂಸ್ಕೃತಿಯನ್ನು ಇದ್ದ ಹಾಗೆ ಇಲ್ಲಿ ತರುವುದು ಅನವಶ್ಯಕ ಎಂಬುದು ಹೆಸರು ಹೇಳಲಿಚ್ಛಿಸದ ಚಳವಳಿಕಾರರ ಅನಿಸಿಕೆ. ಇಂಥ ಹೀನ ಸಂಸ್ಕೃತಿಗೆ ನಾವು ಸೊಪ್ಪು ಹಾಕಬಾರದು ಎಂಬುದು ಅವರ ವಾದ.ಇದನ್ನು ಒಪ್ಪು ಸ್ಲಟ್ ವಾಕ್ ಆಯೋಜಕರು ಸಿದ್ಧರಿಲ್ಲ. ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ವಿರೋಧಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಹೇಗೆ ಭಾರತೀಯ ಸಂಸ್ಕೃತಿಗೆ ವಿರೋಧವಾಗುತ್ತದೆ ಎಂದು ಆಯೋಜಕರಲ್ಲೊಬ್ಬರು ಪ್ರತಿವಾದ ಮಂಡಿಸಿದ್ದಾರೆ. ಸ್ಲಟ್ ವಾಕ್ ಮಾಡುವುದು ಖಂಡಿತ. ಇದರ ದಿನಾಂಕ ಇನ್ನೆರಡು ದಿನಗಳಲ್ಲಿ ನಗದಿಪಡಿಸಲಾಗುವುದು ಮತ್ತು ಮುಂದಿನ ವರ್ಷ ಜನವರಿ ಮೊದಲ ವಾರದಲ್ಲಿ ಸೆಮಿನಾರ್ ಕೂಡ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.ಸ್ಲಟ್ ವಾಕ್ ಬೆಂಗಳೂರಿನಲ್ಲಿ ನಡೆಸಬೇಕಾ, ನಡೆಸಬಾರದಾ? ಇದು ಭಾರತೀಯ ಸಂಸ್ಕೃತಿಯೆ? ಈ ಚಳವಳಿ ಅವಶ್ಯಕವೆ? ಅಸಭ್ಯವಾಗಿ ದಿರಿಸು ಧರಿಸದೆ ಪ್ರತಿಭಟನೆ ವ್ಯಕ್ತಪಡಿಸಲು ಸಾಧ್ಯವಿಲ್ಲವೆ? ಈ ಚಳವಳಿ ಇನ್ನೊಂದು 'ಪಿಂಕ್ ಚಡ್ಡಿ'ಯಂಥ ಸಂಘರ್ಷಕ್ಕೆ ದಾರಿಮಾಡಿಕೊಡುವುದಿಲ್ಲವೆ? ಪ್ರಜ್ಞಾವಂತರಾದ ದಟ್ಸ್ ಕನ್ನಡ ಓದುಗರು ತಮ್ಮ ಅಭಿಪ್ರಾಯ ಮುಕ್ತವಾಗಿ ತಿಳಿಸಲಿ. [ದಟ್ಸ್‌ಕನ್ನಡ ಫೇಸ್‌ಬುಕ್ ಫ್ಯಾನ್‌ಕ್ಲಬ್‌ನಲ್ಲಿ ಬಂದ ಪ್ರತಿಕ್ರಿಯೆ ಓದಿರಿ]
English summary
Supporters and organizers of Slutwalk in Bangalore have hit back with vengeance that they will organize another Slutwalk and even in a big way. Slutwalk was scheduled on Dec 4, but it had to be cancelled as some organizations opposed it and police felt that Slutwalk would create law and order problem.

Get Notifications from Kannada Indiansutras