ಪುರುಷರ ಜನನಾಂಗದ ಉದ್ದ ಗಾತ್ರ ಕೂಡಾ ಅಡ್ಡಿಯಾಗುತ್ತದೆಯೇ? ಆರೋಗ್ಯವಂತ ಪುರುಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಜನನಾಂಗ ಮಾರ್ಪಾಟು ಮಾಡಿಕೊಳ್ಳಬಹುದಾದ ವ್ಯವಸ್ಥೆ ಇಲ್ಲವೇ? ಲೈಂಗಿಕ ತೃಪ್ತಿಗೆ ಜನನಾಂಗ ಹಿಗ್ಗಿಸುವಿಕೆ ಅವಶ್ಯವೇ? ಎಂಬ ನಾನಾ ಪ್ರಶ್ನೆಗಳು ಒಬ್ಬ ಅತೃಪ್ತ ಕಾಮಾರ್ಥಿಯ ಮನಸ್ಸಿನಲ್ಲಿ ಓಡುತ್ತಿರುತ್ತದೆ.
ಶಿಶ್ನ ಗಾತ್ರದ ಬಗ್ಗೆ ಚಿಂತಿಸುವವರ ಉಪಯೋಗಕ್ಕೆ ಇಲ್ಲಿ ಕೆಲವು ಸಲಹೆ, ಸಮಾಧಾನಕರ ಅಂಶಗಳಿವೆ. ಗಾತ್ರದ ಬಗ್ಗೆ ಚಿಂತಿಸದೆ ನಿಮ್ಮಾಕೆಗೆ ಸಂಪೂರ್ಣ ಸುಖ ನೀಡುವ ಮುನ್ನ ಒಮ್ಮೆ ಓದಿಬಿಡಿ.
ಗಾತ್ರದ ಬಗ್ಗೆ ಆಕೆ ಚಿಂತಿಸುವುದಿಲ್ಲ: ಕೊಂಚ ಅಚ್ಚರಿಯಾದರೂ, ಬೆಂಗಳೂರಿನ ತಜ್ಞ ವೈದ್ಯರ ಪ್ರಕಾರ ಗಾತ್ರದ ಬಗ್ಗೆ ಹೆಚ್ಚು ಚಿಂತಿಸುವುದು ಗಂಡಸರೇ ಹೊರತೂ ಹೆಂಗಸರಲ್ಲ. ಹೇಗೆ ಸ್ತನ ಗಾತ್ರ ಚಿಕ್ಕದಿದ್ದರೆ ಮನಸ್ಸಿನಲ್ಲಿ ಸಂದೇಹಗಳು ಏಳುತ್ತದೆಯೋ ಅದೇ ರೀತಿ ಪುರುಷರು ತಮ್ಮ ಜನನಾಂಗದ ಗಾತ್ರ ಸಣ್ಣದಿದ್ದರೆ ಲೈಂಗಿಕ ತೃಪ್ತಿ ಅಸಾಧ್ಯ ಎಂದು ನಂಬುತ್ತಾರೆ.
ಸಂಭೋಗಕ್ಕೂ ಮುನ್ನ ಮಹಿಳೆಯನ್ನು ಉದ್ರೇಕಿಸಿ ನಿಮ್ಮತ್ತ ಸೆಳೆದುಕೊಳ್ಳಲು ನಾನಾ ಉಪಾಯಗಳಿವೆ. ಕಾಮತೃಪ್ತಿ ಎಂಬುದು ಬರೀ ಸಂಭೋಗದಿಂದ ಮಾತ್ರ ಎಂಬ ಸಣ್ಣತನದ ನಂಬಿಕೆ ಬಿಟ್ಟರೆ ಒಳ್ಳೆಯದು.
ದೊಡ್ದ ಗಾತ್ರ ನಿಭಾಯಿಸುವುದು ಕಷ್ಟ: ಪುರುಷ ತನ್ನ ಪ್ರಾಬಲ್ಯ ಮೆರೆಯಲು ಕಸಿ ಮಾಡಿಸಿಕೊಂಡು ಗಾತ್ರ ಹಿಗ್ಗಿಸಿಕೊಂಡು ಮುನ್ನುಗ್ಗಬಹುದು. ಆದರೆ, ನಿಮಗೆ ಸುರತ ಸುಖ ಸಿಗಬೇಕಾದರೆ ನಿಮ್ಮ ಸಂಗಾತಿ ನಿಮ್ಮಷ್ಟು ಒರಟಲ್ಲ ಎಂಬ ಮನವರಿಕೆ ಇದ್ದರೆ ಚೆನ್ನ.
ಮೃದು ದೇಹದ ಮೇಲೆ ದೈತ್ಯ ಗಾತ್ರವನ್ನು ಸ್ಥಾಪಿಸಿ ಆಕೆಗೆ ನೋವು ನೀಡಿ ನೀವು ಸುಖಿಸಬಹುದು ಎಂದು ಎಣಿಸಿದ್ದರೆ ನಿಮ್ಮ ಊಹೆ ತಪ್ಪು. ಓರೆಲ್ ಸೆಕ್ಸ್ ಮಾಡುವ ಬಯಕೆ ಉಂಟಾದರೂ ದೊಡ್ಡ ಗಾತ್ರ ತೊಂದರೆ ಕೊಡುವುದಂತೂ ನಿಜ.
ಉದ್ರೇಕ, ತುದಿ ಮುಟ್ಟುವಿಕೆಗೆ ಗಾತ್ರದ ಚಿಂತೆ ಬೇಕಿಲ್ಲ. ಆಕೆಯನ್ನು ರಮಿಸಿ ನಿಮ್ಮ ಹತೋಟಿಗೆ ತೆಗೆದುಕೊಂಡರೆ, ನಂತರ ಏನಿದ್ದರೂ ಕೊಟ್ಟು ತಗೋ ಮಾತು. ಲೈಂಗಿಕ ಕಾಮನೆಯ ತುಟ್ಟತುದಿ ತಲುಪುವ ಮುನ್ನ ನಿಮ್ಮ ಸರಸ ಚತುರತೆಗೆ ಆಕೆ ತಲೆ ಬಾಗುವಂತಾದರೆ ಸಾಕು.
ಮುಷ್ಟಿ ಮೈಥುನ : ಹೆಚ್ಚಿನ ಕಾಮತೃಪ್ತಿ ಹೊಂದಲು ಕೆಲವೊಮ್ಮೆ ಮುಷ್ಟಿ ಮೈಥುನ ಚಟಕ್ಕೆ ಬಿದ್ದರೂ ತಪ್ಪಲ್ಲ. ಇದರಿಂದ ಲೈಂಗಿಕ ಕ್ರಿಯೆ ಮೇಲೆ ಹೆಚ್ಚಿನ ಹಿಡಿತ ಸಿಗುತ್ತದೆ. ಸುರತ ಕ್ರಿಯೆಯನ್ನು ಹೆಚ್ಚು ಕಾಲ ವಿಸ್ತರಿಸಲು ಸಹಕಾರಿಯಾಗುತ್ತದೆ.
ಅದರೆ, ಮುಷ್ಟಿ ಮೈಥುನ ಚಟ ನಿಮ್ಮನ್ನು ಆವರಿಸಿ, ಸಂಪೂರ್ಣ ಸುಖದ ಕಲ್ಪನೆ ನಿಮ್ಮತ್ತ ಸುಳಿಯದಂತೆ ಆಗುವ ಮುನ್ನ ಎಚ್ಚೆತ್ತುಕೊಳ್ಳಿ. ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದು ಅವಶ್ಯವಿದ್ದರೆ ಮಾತ್ರ ಶಿಶ್ನ ಹಿಗ್ಗಿಸುವಿಕೆ ಚಿಕಿತ್ಸೆಗೆ ಶರಣಾಗಿ.
ಶಸ್ತ್ರಚಿಕಿತ್ಸೆ ಇಲ್ಲದೆ, ಮಾತ್ರೆ ಹಾಗೂ ಕೆಲ ವ್ಯಾಯಾಮಗಳ ಮೂಲಕ ಹಿಗ್ಗಿಸುವಿಕೆ ಸಾಧ್ಯವಿದೆ. ಆದರೆ, ವೈದ್ಯರ ಸಲಹೆ, ಸೂಚನೆ ಇಲ್ಲದೆ ಯಾವುದೇ ಅನಾಹುತ ಮಾಡಿಕೊಳ್ಳಬೇಡಿ.
ನಿಮ್ಮ ಇಡೀ ದೇಹ, ಮನಸ್ಸು ಮೆಚ್ಚಿ ನಿಮ್ಮ ಕೈ ಹಿಡಿದ ನಿಮ್ಮಾಕೆ ಕೇವಲ ಒಂದು ಅಂಗ ಗಾತ್ರ ಏರುಪೇರು ಎಂದು ನಿಮ್ಮನ್ನು ದೂರು ತಳ್ಳುವ ಮನಸ್ಸು ಮಾಡುವುದಿಲ್ಲ. ನಿಮ್ಮ ಶಕ್ತಿ ಸಾಮರ್ಥ್ಯ, ತೊಂದರೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಿ. ಕೊರಗುವ ಬದಲು ಮಲಗಿ ಸುಖ ಕಾಣುವ ಬಗ್ಗೆ ಯೋಚಿಸಿ.