•  

30ರ ನಂತರ ಸೆಕ್ಸ್ ಗೆ ಹದವಾದ ಸಂಧಿ ಕಾಲ

Array
sensual-behaviour-at-30-plus-age
 
30 ರ ನಂತರ ಅಥವಾ 40ರ ಒಳಗಾಗಿ ...: ಇದು ಸೆಕ್ಸ್ ಗೆ ಹದವಾದ ಕಾಲಘಟ್ಟ. ಬಾಹ್ಯ ಪ್ರಯೋಗಗಳಿಗೆ ಮೈಮನವೊಡ್ಡುವುದಕ್ಕೆ ಹಾತೊರೆಯುವ ಸಂಧಿ ಕಾಲ ಇದು. ಈ ಕಾಲದಲ್ಲಿ ಯುವಕ-ಯುವತಿಯರಿಗೆ ಔಟ್ ಡೋರ್ ಸೆಕ್ಸ್ ಹೆಚ್ಚು ಸುಖ ನೀಡುತ್ತದೆ ಎಂಬ ಕಲ್ಪನೆ ಮನೆ ಮಾಡುತ್ತದೆ. ಸಾರ್ವಜನಿಕರು ವಿರಳವಾಗಿ ಕಂಡುಬರುವ ಬೀಚ್, ಪಾರ್ಕ್, ಏಕಾಂತ ಪ್ರದೇಶಗಳಲ್ಲಿ ಕತ್ತೆಲೆಯಲ್ಲಿ ಆಟ ಶುರುವಿಟ್ಟುಕೊಳ್ಳುತ್ತಾರೆ.

ಇನ್ನೂ ಒಂದು ರಮ್ಯ ಘಟ್ಟ ಇಲ್ಲಿ ಮನೆ ಮಾಡಿರುತ್ತದೆ. ಈ 30 ರ ನಂತರದವರಿಗೆ ಮನೆಯಲ್ಲೇ ಶವರ್ ಅಥವಾ ಬಾತ್ ಟಬ್ ಹೆಚ್ಚು ಆಪ್ಯಾಯಮಾನವಾಗಿ ಕಂಡುಬರುತ್ತದೆ. ಚೊಕ್ಕಟವಾಗಿ ಮನೆಯಲ್ಲೇ ಚಕ್ಕಂದಕ್ಕೆ ಇಳಿಯುತ್ತಾರೆ.

ಅದಕ್ಕಾಗಿ ನಾನಾ ಆಟ, ಕಾಲ್ಪನಿಕ ಲೋಕದಲ್ಲಿ ವಿಹರಿಸುತ್ತಾರೆ. ವೀಕೆಂಡ್ ಮೋಜು ಮಸ್ತಿಗೆ ಮೀಸಲಾಗುತ್ತಾರೆ. ದಂಪತಿ ಉತ್ತುಂಗಕ್ಕೆ ತಲುಪುವುದೂ ಈ ಕಾಲಘಟ್ಟದಲ್ಲೇ. ಆದರೆ ಮಹಿಳೆಯರು ಸೆಕ್ಸ್ ನಿಂದ ನಿಧಾನವಾಗಿ ದೂರವಾಗುವ ಕಾಲ ಇದಾಗಿದೆ. ಏಕೆಂದರೆ ಮಗುವಿನ ನಿರೀಕ್ಷೆ/ಆಗಮನವಾಗುತ್ತಿದ್ದಂತೆ ಮಹಿಳೆ ಸುರಕ್ಷತೆಯ ಚಿಪ್ಪಿನೊಳಗೆ ಸೇರಬಯಸುತ್ತಾಳೆ.

ಗರ್ಭಧಾರಣೆ ಸಮಯದಲ್ಲೂ ಸೆಕ್ಸ್ ಸಾಹಸ ನಡೆಯುತ್ತದಾದರೂ ಅದು ಸುರಕ್ಷತೆಯ ಪರಿಧಿಯಲ್ಲೇ ಎಲ್ಲವೂ ನಡೆಯುತ್ತದೆ. ಆದರೆ ಬಿಸಿಯಪ್ಪುಗೆ, ಸಿಹಿ ಮುತ್ತು, ಕರ ಚೇಷ್ಟೆಗೆ ಹೇಳಿ ಮಾಡಿಸಿದ ಕಾಲ ಘಟ್ಟ ಇದು.

English summary
The 30s are a time to experiment, almost all 30-somethings claim to have had sex outdoors. 30 somethings prefer having sex somewhere semi-public like the beach, in the garden or on a park bench in the darkness. The 30s also mark the arrival of children in a married couple's life, so the sex drive naturally dwindles.
Story first published: Monday, August 8, 2011, 13:08 [IST]

Get Notifications from Kannada Indiansutras