ಜೀವನದ ಯಾವುದೇ ಹಂತಕ್ಕಿಂತ ನಲವತ್ತರ ಹರೆಯದಲ್ಲಿ ಹೆಚ್ಚಿನ ಸಂತಸ ಅನುಭವಿಸುತ್ತಿದ್ದೇವೆ ಎಂದು ಸಮೀಕ್ಷೆಯೊಂದರಲ್ಲಿ ಮಹಿಳಾಮಣಿಗಳು ತಮ್ಮ ಹಾಸಿಗೆಯ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇವರಲ್ಲಿ ಕೆಲವರು, ಗಂಡನ ಮೇಲಿನ ಆಸಕ್ತಿ ಕುಗ್ಗಿ, ಪರಪುರುಷರ ಕಡೆಗಿನ ಆಸಕ್ತಿ ಹಿಗ್ಗುವುದು ಈ ಹಂತದಲ್ಲಿಯೇ ಎಂದು ಮನಬಿಚ್ಚಿ ಹೇಳಿದ್ದಾರೆ.
ಕಾರಣವೇನು? : ನಲವತ್ತು ದಾಟುತ್ತಿದ್ದಂತೆ ಮಕ್ಕಳು ಸ್ವತಂತ್ರ ಹಕ್ಕಿಗಳಾಗಿರುತ್ತಾರೆ, ಗೂಡಿನಿಂದ ಹೊರಹಾರಿರುತ್ತಾರೆ, ಗಂಡನ ವೃತ್ತಿ ಒಂದು ಹಂತ ತಲುಪಿರುತ್ತದೆ, ಸಂಸಾರ ರಥ ಎಳೆಯುವ ಜವಾಬ್ದಾರಿ ಹೆಗಲಿನಿಂದ ಇಳಿದಿರುತ್ತದೆ, ಒಂದು ರೀತಿಯ ನಿರಾಳಭಾವ ತಾನೇ ತಾನಾಗಿರುತ್ತದೆ. ತಮ್ಮ ದೇಹದ ಮೇಲಿನ ರತಿ, ವ್ಯಾಮೋಹ ಕಡಿಮೆಯಾಗುತ್ತ, ಮನ್ಮಥ ಸಮ್ಮೋಹನಾಸ್ತ್ರ ಬೀಸಿರುತ್ತಾನೆ. ಈ ಹಂತದಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಲು ಆರಂಭವಾಗಿರುತ್ತದೆ.
20ರ ಕುದಿವಯಸ್ಸಿನಲ್ಲಿದ್ದಕ್ಕಿಂತ 40ರ ಮಧ್ಯಇಳಿವಯಸ್ಸಿನಲ್ಲಿ ಮಿಲನ ಮಹೋತ್ಸವದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಯೋಗಕ್ಕಳಿಯುತ್ತಿದ್ದೇವೆ ಎಂದು ಶೇ.80ರಷ್ಟು ಪ್ರಮೀಳೆಯರು ತಿಳಿಸಿದ್ದಾರೆ. ಇತ್ತೀಚೆಗೆ ಮ್ಯಾಟ್ರಿಮೋನಿಯಲ್ ವೆಬ್ ಸೈಟೊಂದು ತಮ್ಮ ತಾಣದಲ್ಲಿ ನಲವತ್ತೇಕೆ ಐವತ್ತರ ಮಹಿಳೆಯರು ಹೆಚ್ಚೆಚ್ಚಾಗಿ ನೊಂದಾಯಿಸಿಕೊಳ್ಳುತ್ತಿದ್ದಾರೆ, ಸಂಗಾತಿಗಾಗಿ ಹುಡುಕುತ್ತಿದ್ದಾರೆ, ಹೊಸ ಜೀವನಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ಹೇಳಿತ್ತು. ಇವರಲ್ಲಿ ಬೆಂಗಳೂರಿನ ಆಂಟಿಯರು ಹೆಚ್ಚಾಗಿದ್ದುದು ಕಂಡುಬಂದಿತ್ತು.
ತಜ್ಞರು ಏನು ಹೇಳುತ್ತಾರೆ? : ಸುರತ ಕ್ರೀಡೆಗೆ ಸಂಬಂಧಿಸಿದಂತೆ 40ರ ಮಹಿಳೆಯರು ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ. ಗಂಡ ಹಳಬನಾಗಿದ್ದರೂ ಹೊಸಬಯಕೆಗಳು ಕೆರಳಿರುತ್ತವೆ. ತಮಗೇನು ಬೇಕೆಂದು ಸ್ಪಷ್ಟವಾಗಿ ಗೊತ್ತಿರುತ್ತದೆ. ಗಂಡನಿಗೆ ಹೇಳಿಕೊಳ್ಳಲು ಕೂಡ ಯಾವುದೇ ಹಿಂಜರಿಕೆಯಿರುವುದಿಲ್ಲ. ಸಾಂಪ್ರದಾಯಿಕ ಮನೆತನದ ಮಹಿಳೆಯರು ಇದನ್ನು ಒಪ್ಪಲಿಕ್ಕಿಲ್ಲ. ಆದರೆ, ಜಗತ್ತು ಬದಲಾಗುತ್ತಿದೆ. ಕಾಲ ಹಿಂದಿನಂತಿಲ್ಲ.
20ರ ಹರೆಯದಲ್ಲಿ ಮದುವೆಯಾದ ಮಹಿಳೆಯರು ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ತೃಪ್ತಿಯಾದಂತೆ ನಾಟಕವಾಡುವುದು ಜಾಸ್ತಿ. ಆದರೆ, ವಯಸ್ಸು ಜೀವನದ ಮುಕ್ಕಾಲು ಭಾಗ ಸವೆಸಿದಾಗ ಈ ನಾಟಕೀಯತೆ ಬೇಕಾಗಿರುವುದಿಲ್ಲ. ಆದ್ದರಿಂದ, ಹಾಸಿಗೆಯಲ್ಲಿ ಸುಖ ತಾನಾಗಿಯೇ ಲಭಿಸುತ್ತದೆ. ಎಂಥ ಭಂಗಿಗಳು ಹೆಚ್ಚಿನ ಸುಖ ನೀಡುತ್ತವೆ ಎಂಬುದು ತಿಳಿದಿರುತ್ತದೆ. ಈ ಕುರಿತಂತೆ ನಾಚಿಕೆಯೂ ಮಾಯವಾಗಿರುತ್ತದೆ.
ಶೇ.5ರಷ್ಟು ಮಹಿಳೆಯರು ಗಂಡನ ನಂಬಿಕೆಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದರೂ ಅತ್ಯುತ್ತಮ ಸುರತಕ್ರಿಯೆ ನಡೆಸಿದ್ದು ಬಾಳಸಂಗಾತಿಯ ಜೊತೆಯೇ ಎಂದು ಮನದಾಳದಿಂದ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಚಾಳೀಸು ಧರಿಸುವ ಪುರುಷರು ಏನೆನ್ನುತ್ತಾರೆ?